Advertisement

ಇಂದು ಎಲ್ಲೆಲ್ಲೂ ಯೋಗಾಯೋಗ

08:10 AM Jun 21, 2022 | Team Udayavani |

ನವದೆಹಲಿ: ಜಗತ್ತಿನಾದ್ಯಂತ ಮಂಗಳವಾರ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಧಾನ ಕಾರ್ಯಕ್ರಮ ಜರುಗಲಿದೆ. ಸುಮಾರು 15 ಸಾವಿರ ಮಂದಿ ಮೋದಿಯವರೊಂದಿಗೆ ಯೋಗಾಭ್ಯಾಸ ಮಾಡಲಿದ್ದಾರೆ.

Advertisement

“ಮಾನವತೆಗಾಗಿ ಯೋಗ’ ಎಂಬ ಥೀಮ್‌ನಡಿ ಈ ವರ್ಷದ ಯೋಗ ದಿನ ಆಚರಿಸಲಾಗುತ್ತದೆ. ದೇಶಾದ್ಯಂತ ಒಟ್ಟು 75 ಸಾವಿರ ಸ್ಥಳಗಳಲ್ಲಿ ಮೆಗಾ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನೋಯ್ಡಾದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೆಹಲಿಯಲ್ಲಿ ಯೋಗಾಭ್ಯಾಸ ಮಾಡಲಿದ್ದಾರೆ.

ಸೋಮವಾರ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ನಾಳೆ ಅಂದರೆ ಜೂನ್‌ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನವತೆಗಾಗಿ ಯೋಗ ಎಂಬ ಥೀಮ್‌ನಡಿ, ನಾವೆಲ್ಲರೂ ಈ ಯೋಗ ದಿನವನ್ನು ಯಶಸ್ವಿಯಾಗಿಸೋಣ ಮತ್ತು ಯೋಗವನ್ನು ಮತ್ತಷ್ಟು ಜನಪ್ರಿಯಗೊಳಿಸೋಣ’ ಎಂದು ಬರೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next