Advertisement

International swimming: ಚಿಂತನ್‌ ಶೆಟ್ಟಿ ದಾಖಲೆ

11:45 PM Feb 28, 2024 | Team Udayavani |

ಮಂಗಳೂರು: ಟಾಂಜಾ ನಿಯಾ ದಲ್ಲಿ ನಡೆದ ತಾಲಿಸ್‌-ಐಎಸ್‌ಟಿ ಆಹ್ವಾನಿತ ಅಂತಾರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಮಂಗಳಾ ಈಜು ಕ್ಲಬ್‌ನ ಚಿಂತನ್‌ ಎಸ್‌. ಶೆಟ್ಟಿ ಅವರು 15-16 ವರ್ಷ ವಯೋಮಿತಿಯ ಬಾಲಕರ ವಿಭಾಗದ 50 ಮೀ. ಮತ್ತು 100 ಮೀ. ಫ್ರೀಸ್ಟೈಲ್‌; 50 ಮೀ., 100 ಮೀ. ಬಟರ್‌ಫ್ಲೆ$ç ಹಾಗೂ 100 ಮೀ. ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಗಳಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ, 400 ಮೀ. ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 4×50 ಮೀ. ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಪದಕ ಜಯಿಸಿದ್ದಾರೆ.
ಇವರು ಮಂಗಳೂರಿನ ಬಂಟ್ಸ್‌ ಹಾಸ್ಟೆಲ್‌ ರಾಮಕೃಷ್ಣ ಹೈಸ್ಕೂಲ್‌ನ ವಿದ್ಯಾರ್ಥಿ. ಎಂ. ಶಿವಾನಂದ ಗಟ್ಟಿ, ಶಿಶಿರ್‌ ಎಸ್‌. ಗಟ್ಟಿ, ಕೀರ್ತನ್‌ ಎಸ್‌. ಶೆಟ್ಟಿ. ಚೇತನ್‌ ಎಸ್‌. ಶೆಟ್ಟಿ, ರಾಜೇಶ್‌ ಖಾರ್ವಿ ಬೆಂಗ್ರೆ ಅವರಿಂದ ಮನಪಾ ಈಜು ಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next