Advertisement

ಶಾಂತಿಯಿಂದ ಬದುಕಿದಾಗ  ಮಾತ್ರ  ಸಮಾನತೆ  ಸಾಧ್ಯ

10:31 PM Sep 20, 2021 | Team Udayavani |

ಪ್ರತೀ ವರ್ಷ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ವಿಶ್ವದಾಂದ್ಯಂತ ಸೆ. 21ರಂದು ಆಚರಿಸಲಾ ಗುತ್ತದೆ. ವಿಶ್ವಸಂಸ್ಥೆಯ ಮಹಾ ಸಭೆ ಇದನ್ನು 24 ತಾಸು ಕಾಲ ಅಹಿಂಸೆ ಮತ್ತು ಕದನ ವಿರಾಮ ಆಚರಿಸುವ ಮೂಲಕ ಶಾಂತಿ ಆದರ್ಶಗಳನ್ನು ಬಲಪಡಿಸುವ ದಿನವೆಂದು ಘೋಷಿಸಿದೆ.

Advertisement

ಹಿನ್ನೆಲೆ:

1981ರಲ್ಲಿ ವಿಶ್ವ ಸಂಸ್ಥೆಯ ಮಹಾಸಭೆ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲು ನಿರ್ಧ ರಿಸಿತು. ಎರಡು ದಶಕ ಗಳ ಅನಂತರ ಅಂದರೆ, 2001ರ ಮಹಾಸಭೆಯಲ್ಲಿ ಸರ್ವಾ ನುಮತದಿಂದ ಈ ದಿನವನ್ನು ಘೋಷಿಸಲಾಯಿತು. ಯುದ್ಧ ಮತ್ತು ಹಿಂಸೆಯನ್ನು ತೊಡೆದು ಹಾಕಿ ಶಾಂತಿ, ಸಹಬಾಳ್ವೆಯಿಂದ ಬದುಕಬೇಕು ಎಂಬ ಸಂದೇಶವನ್ನು ಪ್ರತಿಪಾದಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಶಾಂತಿಯ ಮೌಲ್ಯವನ್ನು ಸಾರುತ್ತ ಮುನ್ನಡೆ ಯಲು ದಿನವನ್ನು ಆಚರಿಸ ಲಾಗುತ್ತದೆ. ಪ್ರತೀ ಬಾರಿ ವಿಶ್ವ ಸಂಸ್ಥೆಯ ನ್ಯೂಯಾರ್ಕ್‌ ಪ್ರಧಾನ ಕಚೇರಿಯಲ್ಲಿ ಶಾಂತಿ ಗಂಟೆಯನ್ನು ಬಾರಿಸುವ ಮೂಲಕ ವಿಶ್ವ ಶಾಂತಿ ದಿನವನ್ನು ಆಚರಿಸಲಾಗುತ್ತದೆ.

ಥೀಮ್‌: “ಸಮಾನತೆ ಮತ್ತು ಸುಸ್ಥಿರ ಜಗತ್ತಿಗಾಗಿ ಪುನಶ್ಚೇತನ’ ಇದು ಈ ವರ್ಷದ ವಿಶ್ವಶಾಂತಿ ದಿನದ ಥೀಮ್‌ ಆಗಿದೆ. 2021ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ನಮ್ಮಿಂದಾದ ಸಹಾಯ ಮಾಡುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು  ಸಮಾನತೆ ಯನ್ನು ಪ್ರತಿಪಾದಿಸುವುದು ಈ ವರ್ಷದ ಘೋಷವಾಕ್ಯವಾಗಿದೆ. ಇವೆಲ್ಲದಕ್ಕಿಂತ ಆರೋಗ್ಯವಾಗಿರುವುದು ಮುಖ್ಯ ವಾಗಿದ್ದು, ನಮ್ಮ ಆರೋಗ್ಯ ಕಾಪಾಡಿ ಕೊಂಡು ಅದರ ಜತೆ ಜತೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಾಳುವುದು ಅವಶ್ಯವಾಗಿದೆ.

ಕೋವಿಡ್‌ನಿಂದ ಮುಕ್ತವಾಗಲು ಎಲ್ಲ ದೇಶಗಳು ಸಮರ್ಥ ಹೋರಾಟ ನಡೆಸುತ್ತಿದೆ. ಆದರೆ ಕೆಲವು ದೇಶಗ ಳಿಗೆ ಲಸಿಕೆ ಕೊರತೆ ಇದೆ, ಇನ್ನು ಕೆಲವು ದೇಶಗಳಲ್ಲಿ ಲಸಿಕೆಯೇ ದೊರಕದಿರು ವುದು ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ನಾವು ನಮ್ಮಿಂದಾದ ಸಹಾಯ ಹೇಗೆ ಮಾಡಬಹುದು ಎಂಬು ದನ್ನು ಯೋಚಿಸಬೇಕಾಗಿದೆ. ಇದಕ್ಕೆ ಒಗ್ಗಟ್ಟಿನ ನಿರ್ಧಾರ ಅಗತ್ಯ. ಅಲ್ಲದೆ ಶಾಂತಿ ಯಿಂದ ಒಂದಾಗಿ ಬಾಳುವುದು ಬಹು ಮುಖ್ಯವಾಗಿದೆ.

Advertisement

ಹಾಗಾಗಿ ವಿಶ್ವಶಾಂತಿ ದಿನದ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಅನುದಿನವೂ ಇದನ್ನು ಮರೆಯದೇ ಬದುಕಿನಲ್ಲಿ ರೂಢಿಸಿಕೊಂಡರೆ ಉತ್ತಮ.

ಏಕೆ ಮುಖ್ಯ?:

ಶಾಂತಿ ಎನ್ನುವುದು ಪ್ರತಿಯೊಬ್ಬರಿಗೂ ಅಗತ್ಯ. ಯಾವುದಾದರೂ ಅಡಚಣೆಗಳಿಂದ ಮುಕ್ತಿ ಬೇಕು ಎನಿಸುವುದು ಸಹಜ. ಶಾಂತಿ ಎಂದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಒಟ್ಟಾಗಿ ಬದುಕುವುದು.

ಕಷ್ಟವಾದ ಸಮಸ್ಯೆಗಳನ್ನು ಎದುರಿಸಲು ನಮಗೆ ಶಾಂತಿಯುತ ಪರಿಹಾರ ಮುಖ್ಯವಾಗಿರುತ್ತದೆ. ಜಾಗತಿಕವಾಗಿ ಮತ್ತು ವೈಯಕ್ತಿಕವಾಗಿ ಶಾಂತಿಯ ಅಗತ್ಯವಿದೆ. ಇದಲ್ಲದೆ ಪ್ರತಿಯೊಬ್ಬರ ಜತೆಯಲ್ಲಿಯೂ ಗೌರವಯುತವಾಗಿ ಮತ್ತು ದಯೆಯಿಂದ ವರ್ತಿಸಬೇಕು ಎನ್ನುವುದು ಈ ದಿನದ ಸಾರ.

Advertisement

Udayavani is now on Telegram. Click here to join our channel and stay updated with the latest news.

Next