ಪಣಜಿ: ಅಂತಾರಾಷ್ಟ್ರೀಯ ಮಟ್ಟದ ಜಿ-20 ಶೃಂಗಸಭೆಯ ಎಂಟು ಸಭೆಗಳು ಗೋವಾದಲ್ಲಿ ನಡೆಯಲಿದೆ. ಮೊದಲ ಮೂರು ದಿನಗಳ ಸಭೆಯು ಏಪ್ರಿಲ್ 17 ರಿಂದ 19 ರವರೆಗೆ ಪಂಚತಾರಾ ಹೋಟೆಲ್ಗಳಾದ ತಾಜ್ ಮತ್ತು ಗ್ರ್ಯಾಂಡ್ ಹಯಾತ್ನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ಪಣಜಿಯಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜಿ-20 ಶೃಂಗಸಭೆಗಳ ನಡುವಿನ ಮೊದಲ ಸಭೆಯು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದೆ. ಜಿ-20 ಸಂದರ್ಭದಲ್ಲಿ ಪಣಜಿಯಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ನಾಲ್ಕು ವರ್ಷಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಎರಡು ದಿನಗಳ ‘ನಿಮ್ಮ ಬಾಗಿಲಿನಲ್ಲಿ ಆಡಳಿತ’ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗೋವಾ ಗೆಜೆಟಿಯರ್ ಆರ್ಕೈವ್ಸ್ ಇಲಾಖೆಯ ಅಡಿಯಲ್ಲಿ ಒಂದು ವಿಭಾಗವಾಗಿತ್ತು. ಇದನ್ನು ಈಗ ಪೂರ್ಣ ವಿಭಾಗವಾಗಿ ಪರಿವರ್ತಿಸಲಾಗುತ್ತದೆ ಮತ್ತು ಗೋವಾ ಗೆಜೆಟಿಯರ್ ಮತ್ತು ಐತಿಹಾಸಿಕ ದಾಖಲೆಗಳು ಎಂದು ಮರುನಾಮಕರಣ ಮಾಡಲಾಗುತ್ತದೆ. ಈ ಇಲಾಖೆಯು ಇಲಾಖಾವಾರು ಸಂಶೋಧನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ಮಾವಿನ್ ಗುದಿನ್ಹೊ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ವಿಶೇಷ ಪ್ರಯತ್ನ ನಡೆಸುತ್ತಿದೆ. ಮುಂದಿನ ವರ್ಷದೊಳಗೆ ಇನ್ನೂ 1,000 ನಿರುದ್ಯೋಗಿ ಯುವಕರನ್ನು ಟ್ಯಾಕ್ಸಿ ಉದ್ಯಮಕ್ಕೆ ತರಲಾಗುವುದು ಎಂದರು.