Advertisement
ಹೇಗೆ ನಡೀತಿದೆ ಈ ಮಾಫಿಯಾಫೇಸ್ಬುಕ್ನಲ್ಲಿ ಮಹಿಳೆಯೊಬ್ಬಳು ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ. ಬಳಿಕ ಮಹಿಳೆಯು ತನ್ನ ಬಗ್ಗೆ ಹೇಳಿಕೊಳ್ಳುವ ಮೆಸೇಜ್ ಮಾಡುತ್ತಾಳೆ. ರಿಕ್ವೆಸ್ಟ್ ಒಪ್ಪಿಗೆಯಾದ ಮೇಲೆ ಲೋಕಾಭಿರಾಮ ಮಾತು ಆಡುತ್ತಾಳೆ. ಕೆಲಸ ನೀಡುತ್ತೇವೆ ಕೈ ತುಂಬಾ ಸಂಬಳ ಇದೆ. ಮಧ್ಯವರ್ತಿಯಾಗಿ ಒಂದು ಕಾರ್ಖಾನೆಗೆ ಸಂಬಂಧಿತ ಕಚ್ಚಾವಸ್ತು ತಲುಪಿಸುವ ಕೆಲಸ ಮಾಡಿದರೆ ಸಾಕು ಎಂದು ಹೇಳಿ, ಒಂದು ವೇಳೆ ಕೆಲಸಕ್ಕೆ ನಾವು ಒಪ್ಪಿಕೊಂಡರೆ ಸುಲಭ ಸಂವಹನಕ್ಕಾಗಿ ಮಹಿಳೆಯನ್ನು ಎದುರಿಟ್ಟುಕೊಂಡ ಮೆಸೇಜ್ ಮಾಡುವ ಆ ಗುಂಪು ಮೊಬೈಲ್ ನಂಬರ್ ಪಡೆಯುತ್ತದೆ. ಬಳಿಕ ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳುಹಿಸಲಾಗುತ್ತದೆ.
ಒಮ್ಮೆ ವಾಟ್ಸಾಪ್ ಮೂಲಕ ಸಂಪರ್ಕ ದೊರೆತ ಮೇಲೆ ಮೆಸೇಜ್ ಕಳುಹಿಸುವ ಅವರು ಅವರ ಕಂಪೆನಿ ಮತ್ತು ಅದರ ನಿಯಮ ತಿಳಿಸಿ ಡೀಲ್ ವಿಷಯ ಮಾತನಾಡುತ್ತಾರೆ. ಜತೆಗೆ ಮನೆಯ ವಿಳಾಸವನ್ನು ಪಡೆದುಕೊಳ್ಳುತ್ತಾರೆ. 400-500 ಗ್ರಾಂ.ನ ಚಿಕ್ಕ ಪೊಟ್ಟಣವನ್ನು ಭಾರತದಲ್ಲಿರುವ ಅವರ ಏಜೆಂಟರಿಂದ ಮತ್ತೂಬ್ಬರಿಗೆ ತಲುಪಿಸಬೇಕಾಗಿರುವುದುಅವರು ನೀಡುವ ಕೆಲಸ. ಇದಕ್ಕೆ ಸಹಸ್ರಾರು ಡಾಲರ್ ರೂಪದಲ್ಲಿ ಸಂಭಾವನೆ ಕೊಡುತ್ತಾರೆ. ಅವರ ಕಂಪೆನಿಯ ಏಜೆಂಟರು ನೀಡುವ ವಸ್ತುವನ್ನು ಪಡೆದು ಅವರು ಹೇಳಿದ ಪ್ರದೇಶಕ್ಕೆ ತಲುಪಿಸುವ ಕಾರ್ಯ ಮಾಡಿದರೆ ಸಾಕು ಎಂದು ತಿಳಿಸುತ್ತಾರೆ. ಹಂದಿ ನಾಯಿಗೆ ಬಳಸುವ ಔಷಧವಂತೆ
ಅವರು ಒದಗಿಸುವ ಕಚ್ಛಾ ವಸ್ತುಗಳು ಹಂದಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ತಯಾರಿಸುವ ಔಷಧಕ್ಕೆ ಉಪಯೋಗಿಸುವುದು ಎಂದು ತಿಳಿಸುತ್ತಾರೆ. ಈ ಕಚ್ಛಾ ವಸ್ತುವಿನ ವಿವರ ಕೇಳಿದ್ದಕೆ ಅದು ಸಸ್ಯಜನ್ಯ ಕಚ್ಛಾ ವಸ್ತು ಎಂದು ಉತ್ತರಿಸುತ್ತಾರೆ. ಅಷ್ಟಕ್ಕೂ ಅವನ್ನೆಲ್ಲ ಈ ರೀತಿಯಾಗಿ ಯಾಕೆ ಸಾಗಿಸುವ ಪ್ರಯತ್ನ ಮಾಡಬೇಕು ಎಂಬ ಪ್ರಶ್ನೆ ಮೂಡಿದರೆ ಡ್ರಗ್ ಮಾಫಿಯಾ ಎಂಬ ಸಂಶಯ ಕಾಡುತ್ತದೆ. ಏಕೆಂದರೆ ಅಧಿಕೃತವಾಗಿ ಕಳುಹಿಸಬಹುದಾದ ಔಷಧಿಗೆ ಇಂತಹ ಅಡ್ಡದಾರಿ ಏಕೆ.
Related Articles
ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಹಣ ಸಿಗುತ್ತದೆ ಎಂದು ಹೇಳಿದ ತತ್‌ಕ್ಷಣ ಹಿಂದೆ ಮುಂದೆ ಯೋಚಿಸದೆ ಅವರು ಹೇಳುವ ಕೆಲಸಕ್ಕೆ ತೊಡಗಿಕೊಂಡರೆ ಅಪಾಯದ ಜಾಲದಲ್ಲಿ ಸಿಲುಕಿಕೊಂಡಿರಿ ಎಂದೇ ಅರ್ಥ.
Advertisement