Advertisement
ಈ ಮೈಲುಗಲ್ಲು ನೆಡಲು ಕೊಹ್ಲಿಗೆ 37 ರನ್ ಅಗತ್ಯವಿತ್ತು. ವಿಂಡೀಸ್ ನಾಯಕ ಹೋಲ್ಡರ್ ಎಸೆದ 25ನೇ ಓವರ್‌ನಲ್ಲಿ ಸಿಂಗಲ್ ತೆಗೆಯುವ ಮೂಲಕ ಇದನ್ನು ಪೂರ್ತಿಗೊಳಿಸಿದರು.ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದ 12ನೇ ಹಾಗೂ ಭಾರತದ 3ನೇ ಕ್ರಿಕೆಟಿಗ. ಭಾರತದ ಮತ್ತೂಬ್ಬ ಸಾಧಕನೆಂದರೆ ರಾಹುಲ್ ದ್ರಾವಿಡ್.
ಇದೇ ವೇಳೆ ವಿಶ್ವಕಪ್ ಕೂಟವೊಂದರಲ್ಲಿ ಸತತ ನಾಲ್ಕು “50 ಪ್ಲಸ್’ ರನ್ ಬಾರಿಸಿದ 3ನೇ ನಾಯಕನೆಂಬ ಹೆಗ್ಗಳಿಕೆಯೂ ಕೊಹ್ಲಿ ಅವರ ದಾಯಿತು. ಉಳಿದಿಬ್ಬರು ನಾಯಕರೆಂದರೆ ಗ್ರೇಮ್ ಸ್ಮಿತ್ (2007) ಮತ್ತು ಆರನ್ ಫಿಂಚ್ (2019).