Advertisement

ಮಿಷನ್ 150 ಕಷ್ಟ!; ಬಿಜೆಪಿ ನಿದ್ದೆಗೆಡಿಸಿದ ಆಂತರಿಕ ಸಮೀಕ್ಷೆ?

10:15 AM May 15, 2022 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ವಿಧಾನಸಭೆ ಚುನಾವಣೆ ತಯಾರಿಯಲ್ಲಿ ತೊಡಗಿದ್ದರೂ, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಲಾಗಿದೆ.

Advertisement

ಬಿಜೆಪಿ ಮಿಷನ್‌-150 ಗುರಿ ತಲುಪುವುದು ಕಷ್ಟ. ಮುಖಂಡರ ವಿವಾದಾತ್ಮಕ ಹೇಳಿಕೆ, ನಾಯಕತ್ವ ಪ್ರಶ್ನಿಸುವ ರೀತಿಯ ಅನಿಸಿಕೆ, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕಸರತ್ತು, ವಲಸಿಗರ ಮೇಲೆ ಮೂಡದ ಪೂರ್ಣ ಪ್ರಮಾಣದ ವಿಶ್ವಾಸ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್‌ಐ ನೇಮಕ ಹಗರಣ, ಧಾರ್ಮಿಕ ಸೂಕ್ಷ್ಮ ವಿಚಾರದಲ್ಲಿ ಎದ್ದ ಗದ್ದಲ, ಬೆಲೆ ಏರಿಕೆ, ಸಚಿವರಲ್ಲಿನ ಗೊಂದಲ… ಹೀಗೆ ವಿವಿಧ ವಿಷಯಗಳು ಬಿಜೆಪಿಯ ವರ್ಚಸ್ಸಿಗೆ ಕುಂದುಂಟು ಮಾಡಿವೆ ಎನ್ನುವುದು ಆಂತರಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ತ್ರಿಪುರದಲ್ಲಿ ಸಿಎಂ ಬದಲಾವಣೆ; ಬಿಜೆಪಿ ಶಾಸಕರಲ್ಲೇ ಅಸಮಾಧಾನ; ಜಗಳದ ವಿಡಿಯೋ ವೈರಲ್

ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯತಂತ್ರಕ್ಕಿಳಿದಿರುವ ಬಿಜೆಪಿ ಹೈಕಮಾಂಡ್‌, ಮುಂಬರುವ ಚುನಾವಣೆಯಲ್ಲಿ ಕನಿಷ್ಠ 100 ಕ್ಷೇತ್ರಗಳಲ್ಲಿ ಸಂಘ ನಿಷ್ಠೆ, ಯುವಕರು, ಹೊಸ ಮುಖಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಕೈಗೊಂಡ ಮಾದರಿಯ ಪ್ರಯೋಗಕ್ಕೆ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next