Advertisement

ಅ.11ರಿಂದ ಶಾಲಾ ಮಕ್ಕಳಿಗೆ ಮಧ್ಯಂತರ ರಜೆ

09:14 AM Sep 23, 2017 | |

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆಯ 2017-18ನೇ ಸಾಲಿನ ಶೈಕ್ಷಣಿಕ ಅವಧಿಯ ಮಧ್ಯಂತರ ರಜೆ ಮೈಸೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆ ಹೊರತುಪಡಿಸಿ ಬೇರೆಲ್ಲ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 11ರಿಂದ 25ರ ತನಕ ಇರಲಿದೆ.

Advertisement

ದಸರಾ ನಿಮಿತ್ತ ಜಿಲ್ಲಾಧಿಕಾರಿಗಳ ವಿಶೇಷ ಕೋರಿಕೆ ಪತ್ರದ ಅನ್ವಯ ಮೈಸೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ಸೆ.21ರಿಂದಲೇ ಮಧ್ಯಂತರ ರಜೆ ಆರಂಭವಾಗಿದ್ದು, ಅ.5ರ ತನಕ ಇರಲಿದೆ. ಶೈಕ್ಷಣಿಕ ಅವಧಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮೇ 29ರಂದು ಆರಂಭವಾಗಿದ್ದು, 2018ರ ಏ.10ಕ್ಕೆ ಕೊನೆಯಾಗಲಿದೆ. ಬೇಸಿಗೆ ರಜೆಯು ಎಲ್ಲಾ ಜಿಲ್ಲೆಯಲ್ಲೂ 2018ರ ಏ.11ರಿಂದ ಆರಂಭವಾಗಿ ಮೇ 27ಕ್ಕೆ ಮುಗಿಯಲಿದೆ. ಏ.14ರಂದು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಕಡ್ಡಾಯವಾಗಿ ಶಾಲೆಗೆ ಹೋಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸಬೇಕು. ಕನ್ನಡ ರಾಜ್ಯೋತ್ಸವ ಆಚರಿಸುವ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಮಧ್ಯಂತರ ರಜೆಯನ್ನು ಅವಶ್ಯಕತೆಗೆ ಅನುಗುಣವಾಗಿ
ಮಾರ್ಪಡಿಸಿ, ಇಲಾಖೆಗೆ ವರದಿ ಸಲ್ಲಿಸಬೇಕು. 

ಶಾಲಾವಧಿಯಲ್ಲಿ ಮುಷ್ಕರ ಅಥವಾ ಇನ್ನಿತರ ಕಾರಣಗಳಿಂದ ಜಿಲ್ಲಾ ವ್ಯಾಪ್ತಿಯಲ್ಲಿ ರಜೆ ಘೋಷಿಸಿದ್ದಲ್ಲಿ, ಅಂತಹ ಅಪವ್ಯಯವನ್ನು ರಜಾದಿನಗಳಲ್ಲಿ ಸರಿದೂಗಿಸಿಕೊಳ್ಳುವಂತೆ ಆಯಾ ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆ ಸೂಚಿಸಸಿದೆ.

Advertisement

Udayavani is now on Telegram. Click here to join our channel and stay updated with the latest news.

Next