ಕಲಬುರಗಿ: ದಿನಪತ್ರಿಕೆಗಳನ್ನು ಓದುವ ಅಭಿರುಚಿ ಹೆಚ್ಚಿಸಲು 1979ರಿಂದ ಆರಂಭವಾದ ಸಗಟು ಹಾಗೂ ಕಿರುಕುಳ ವ್ಯಾಪಾರಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ ಮೆಡಿಕಲ್ ಅಂಗಡಿ ವತಿಯಿಂದ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಲೀಕ ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಸದಸ್ಯ ವಿಜಯಕುಮಾರ ಸಾತನೂರಕರ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೆಡಿಕಲ್ ಅಂಗಡಿಯಿಂದ ಔಷಧ ಪಡೆಯುವ ಯಾವುದೇ ಗ್ರಾಹಕರು ಆಯಾ ತಿಂಗಳಿನ ದಿನಪತ್ರಿಗಳ ಮುಖಪುಟದ ಶಿರ್ಷಿಕೆ ಅಂಗಡಿಗೆ ತಂದೊಪ್ಪಿಸಿದರೆ, ಪ್ರತಿ ತಿಂಗಳು ನಡೆಸುವ ಡ್ರಾದಲ್ಲಿ ಆ ದಿನಪತ್ರಿಕೆ ಬಂದರೆ ಆ ಗ್ರಾಹಕ ಎಷ್ಟು ಮೊತ್ತದ ಔಷಧಿ ಖರೀದಿಸಲಾಗಿರುತ್ತದೆಯೋ ಅಷ್ಟು ಮೊತ್ತ ಬಹುಮಾನ ನೀಡಲಾಗುತ್ತದೆ.
ಬಹುಮಾನ ಬೇಡವೆಂದಲ್ಲಿ ಅಷ್ಟೇ ಮೊತ್ತದ ಔಷಧಿ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು. ರಾಜೇಶ ಮೆಡಿಕಲ್ ಅಂಗಡಿಯಲ್ಲಿ ಖರೀದಿ ಮಾಡುವ ಎಲ್ಲ ಜೆನರಿಕ್ ಔಷಧಿಗಳ ಖರೀದಿ ಮೇಲೆ ಶೇ. 50ರಷ್ಟು ರಿಯಾಯಿತಿ, ಸಾವಿರ ರೂ. ಮೌಲ್ಯದ ಖರೀದಿ ಮಾಡುವ ಔಷಧಿ ಮೇಲೆ ಶೇ. 10ರಷ್ಟು ರಿಯಾಯಿತಿ, 1000 ರೂ. ಮೇಲ್ಪಟ್ಟು ಖರೀದಿ ಮೇಲೆ ತಮ್ಮ ಡಾಕ್ಟರ್ ನೀಡಿದ ಚೀಟಿಯೊಂದಿಗೆ ಶೇ. 15ರಷ್ಟು ರಿಯಾಯಿತಿ ಹಾಗೂ
ಎಲ್ಲಾ ತರಹದ ಕಾಸ್ಮಿಟಿಕ್ಸ್, ಸಾಬುನು, ಫೆಸ್ಟ್, ಬೇಬಿ ಪ್ರಾಡಕ್ಟ್ ಫುಡ್ ಪ್ರಾಡಕ್ಟ್ ಹಾಗೂ ಜನರಲ್ ಸಾಮಾನುಗಳ ಮೇಲೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು. ಯೋಜನೆಗೆ ಮಾರ್ಚ್ 19ರಂದು ಸಂಜೆ 6:00ಕ್ಕೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಗುತ್ತಿದೆ.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಎನ್‌ಇಕೆಎಸ್ ಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಬಾಗವಾನ ಹಾಗೂ ಇತರರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯೋಜನೆಗೆ ಅಖೀವ್ ಹೆಲ್ತ ಕೇರ್ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಎಸ್.ಎಸ್. ಪಾಟೀಲ, ಗ್ರಾಹಕ ರಾಜಶೇಖರ ಉಪ್ಪಿನ್ ಹಾಜರಿದ್ದರು.