Advertisement

ಅಮೆರಿಕದಲ್ಲಿ ಮತ್ತೆ ಬಡ್ಡಿ ಏರಿಕೆ?

08:20 PM Apr 30, 2023 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಅರ್ಥ ವ್ಯವಸ್ಥೆ ಸದ್ಯಕ್ಕೆ ಚೇತರಿಕೆಯ ಹಾದಿಯಲ್ಲಿ ಇದ್ದರೂ, ಬುಧವಾರ (ಮೇ 3) ಫೆಡರಲ್‌ ರಿಸರ್ವ್‌ ಶೇ.0.25 (25 ಬೇಸಿಸ್‌ ಪಾಯಿಂಟ್ಸ್‌) ಬಡ್ಡಿ ದರ ಏರಿಕೆ ಮಾಡುವುದು ಖಚಿತ ಎನ್ನಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಅಮೆರಿಕಕ್ಕೆ ಕೊಂಚ ಪ್ರಮಾಣದ ಆರ್ಥಿಕ ಹಿಂಜರಿತ ಬಾಧಿಸಲಿದೆ. ಅದನ್ನು ಎದುರಿಸುವ ನಿಟ್ಟಿನಲ್ಲಿ ಈ ಪ್ರಯತ್ನ. ಒಂದು ವೇಳೆ ಬಡ್ಡಿ ದರ ಏರಿಕೆಯಾದರೆ ಸತತ 10ನೇ ಬಾರಿ, ಬಡ್ಡಿಯ ದರ ಶೇ.5ರಿಂದ ಶೇ.5.25ರ ವರೆಗೆ ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. ಈ ಪ್ರಮಾಣ 2007ಕ್ಕೆ ಹೋಲಿಕೆ ಮಾಡಿದರೆ ಅತ್ಯಧಿಕವಾಗಲಿದೆ. ಆರ್‌ಬಿಐನ ಮುಂದಿನ ವಿತ್ತೀಯ ಸಲಹಾ ಸಮಿತಿ ಸಭೆ ಜೂ.6ರಿಂದ8ರ ವರೆಗೆ ಮುಂಬೈನಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next