Advertisement

ಹಾಜರಾತಿ, ಪ್ರಶ್ನೆ, ಚರ್ಚೆ ಬಿಜೆಪಿಯೇ ಮುಂದು

08:20 AM Jul 18, 2018 | Karthik A |

ಇಂದಿನಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇನ್ನೊಂದೆಡೆ, ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಲೋಕಸಭೆ ಮತ್ತು PRS ವೆಬ್‌ ಸೈಟ್‌ನಲ್ಲಿನ ದತ್ತಾಂಶಗಳನ್ನು ಆಧರಿಸಿ, ಕಳೆದ 4 ವರ್ಷಗಳಲ್ಲಿ ಕಲಾಪಕ್ಕೆ ಹಾಜರಾದ, ಚರ್ಚೆಯಲ್ಲಿ ಭಾಗವಹಿಸಿದ ಹಾಗೂ ಪ್ರಶ್ನೆಗಳನ್ನು ಕೇಳಿರುವ ಲೋಕಸಭೆ ಸಂಸದರ ಮಾಹಿತಿಯನ್ನು ನೀಡಲಾಗಿದೆ.

Advertisement

ಹಾಜರಾತಿ
100% ಬಿಜೆಪಿಯ ಭೈರೋನ್‌ ಪ್ರಸಾದ್‌ ಮಿಶ್ರಾ, ಗೋಪಾಲ್‌ ಚಿನ್ನಯ್ಯ ಶೆಟ್ಟಿ, ರಮೇಶ್‌ ಚಂದರ್‌ ಕೌಶಿಕ್‌. ಬಿಜೆಡಿ ಸಂಸದ ಕುಲಮಣಿ ಸಾಮಾ. 

99% ಶಿವಸೇನೆಯ ಅರವಿಂದ್‌ ಸಾವಂತ್‌, ಬಿಜೆಪಿಯ ಹರೀಶ್‌ ಚಂದ್ರ ಮೀನಾ, ರಾಜೇಶ್‌ ಕುಮಾರ್‌ ದಿವಾಕರ್‌.

90% ಲೋಕಸಭೆಯ 74 ಮಂದಿ ಸದಸ್ಯರು ಹೊಂದಿರುವ ಹಾಜರಾತಿ ಪ್ರಮಾಣ.

983 : NCP ಸಂಸದೆ ಸುಪ್ರಿಯಾ ಸುಳೆ ಕೇಳಿರುವ ಪ್ರಶ್ನೆಗಳು

Advertisement

970 : NCP ಸದಸ್ಯ ಧನಂಜಯ್‌ ಭೀಮ ರಾವ್‌ ಮಹಾದಿಕ್‌ ಕೇಳಿರುವ ಪ್ರಶ್ನೆ 

ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದು ಮಹಾರಾಷ್ಟ್ರದ ಸಂಸದರು

ಚರ್ಚೆಗಳು
ಚರ್ಚೆಯಲ್ಲಿ ಪಾಲ್ಗೊಂಡ ಟಾಪ್‌ 10 ಸಂಸದರ ಪೈಕಿ 9 ಮಂದಿ ಬಿಜೆಪಿಯವರು. ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಿಜೆಪಿಯೇತರ ಸದಸ್ಯರೆಂದರೆ ಬಿಜೆಡಿ ಸಂಸದ ರಬೀಂದ್ರ ಕುಮಾರ್‌ ಜೇನಾ. ಇವರು 269 ಚರ್ಚೆಗಳಲ್ಲಿ ಪಾಲ್ಗೊಂಡಿದ್ದು, 448 ಪ್ರಶ್ನೆಗಳನ್ನು ಕೇಳಿದ್ದಾರೆ. 1,722 ಚರ್ಚೆಗಳಲ್ಲಿ ಭಾಗಿಯಾಗಿರುವುದು ಉತ್ತರಪ್ರದೇಶದ ಸಂಸದ ಮಿಶ್ರಾ. ಇವರು 469 ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಜ್ಯದ ಪಾತ್ರ
ಅತಿ ಹೆಚ್ಚು ಹಾಜರಾತಿ

97% ರಮೇಶ್‌ ಜಿಗಜಿಣಗಿ 
96% ಅನಂತ್‌ಕುಮಾರ್‌ ಹೆಗಡೆ

ಅತಿ ಹೆಚ್ಚು ಪ್ರಶ್ನೆ
626 ಶೋಭಾ ಕರಂದ್ಲಾಜೆ 
597 ಪ್ರತಾಪ್‌ಸಿಂಹ 

ಅತಿ ಹೆಚ್ಚು ಚರ್ಚೆ
133 ಮಲ್ಲಿಕಾರ್ಜುನ ಖರ್ಗೆ

Advertisement

Udayavani is now on Telegram. Click here to join our channel and stay updated with the latest news.

Next