Advertisement
ಅಂತರ್ಜಾಲವು ಒಂದೆಡೆ ಜಾದು ಕಲೆಯನ್ನು ಅಭ್ಯಾಸ ಮಾಡುವವರಿಗೆ ಗುರು ಸ್ಥಾನದಲ್ಲಿದ್ದುಕೊಂಡು ಕಲೆಗೆ ಸಂಬಂಧಿಸಿದ ಅಪಾರ ಜಾನವನ್ನು ನೀಡುತ್ತಿದೆ ಆದರೆ ಇದೇ ಅಂತರ್ಜಾಲವನ್ನು ದುರುಪಯೋಗಪಡಿಸಿಕೊಂಡು ಬಹಳಷ್ಟು ಮಂದಿ ಪ್ರಾಚೀನ ಇತಿಹಾಸವಿರುವ ಜಾದು ಕಲೆಯ ಗುಟ್ಟುಗಳನ್ನು ವಿನಾಕಾರಣ ರಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒಂದೆಡೆ ಜಾದು ಕಲೆಯ ಮೂಲ ಸ್ವರೂಪವಾಗಿರುವ ಅಚ್ಚರಿ ಉಂಟು ಮಾಡುವ ಭಾವಕ್ಕೆ ಧಕ್ಕೆಯಾಗಿ ಜಾದೂ ಕಲೆಯ ಗೌರವಕ್ಕೆ ಚ್ಯುತಿಯಾಗುತ್ತಿದೆ ಎಂದು ಕುದ್ರೋಳಿ ಗಣೇಶ್ ಕಳವಳ ವ್ಯಕ್ತಪಡಿಸುತ್ತಾರೆ.
Related Articles
Advertisement
ಶೈಕ್ಷಣಿಕ ಚೌಕಟ್ಟು ಈ ಜಾದುವಿನಲ್ಲಿ ಇಲ್ಲ. ಈಗ ಜಗತ್ತೆ ನಮ್ಮ ಮುಷ್ಟಿಯೊಳಗಿದೆ. ಆ ನಿಟ್ಟಿನಲ್ಲಿ ನಾವು ಗಮನಿಸುವುದಾರೆ ಆನ್ ಲೈನ್ ನಲ್ಲಿಯೂ ಕೂಡ ಕಲಿಸಿಕೊಡುವ ಸಾಧ್ಯತೆಯನ್ನು ಕುದ್ರೋಳಿಯವರು ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕಂಡುಕೊಂಡವರು.
ಸುಮಾರು 12 ಬ್ಯಾಚ್ ಗಳಲ್ಲಿ ದೇಶಿ ಹಾಗೂ ವಿದೇಶಿ 200 ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಜಾದೂವನ್ನು ಕಲಿಸಿಕೊಡುವುದರ ಮುಖೇನ ಜಾಗತಿಕ ಗುರುವಾದ ಹೆಚ್ಚುಗಾರಿಕೆ ಕುದ್ರೋಳಿ ಗಣೇಶ್ ಅವರದ್ದು.
ಜಾದುಗೆ ಕಥೆ ಕಟ್ಟುವ ಅಗತ್ಯವಿದೆ, ಕಥೆಗೆ ರಂಜನೆ ಬೇಕು. ಪ್ರಾದೇಶಿಕವಾಗಿ ಹಾಗೂ ನಮ್ಮೆದುರಿನ ಜನರನ್ನು ಅರ್ಥ ಮಾಡಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಬುದ್ಧಿವಂತಿಕೆ ಹಾಗೂ ತಂತ್ರಗಾರಿಕೆಯಿಂದ ರೂಢಿಸಿಕೊಂಡಂತಹ ಕಲೆಯನ್ನು ಅಸಡ್ಡೆಯಿಂದ ನೋಡುವ ಕೆಲವು ವೀಕ್ಷಕರಿಂದ ಜಾದೂಗೆ ಧಕ್ಕೆ ಉಂಟಾಗುತ್ತಿದೆ. ಜಾದೂವನ್ನು ಕಲೆಯಾಗಿಯೇ ಪ್ರದರ್ಶನ ಮಾಡಬೇಕು. ಭಾವಕ್ಕೆ ಹೊಂದಿಕೊಳ್ಳುವ ಹಾಗೆ ಜಾದೂವನ್ನು ಮಾಡಿದಾಗ ಮಾತ್ರ ಜಾದೂ ಗೆಲ್ಲುವುದಕ್ಕೆ ಸಾಧ್ಯ ಎನ್ನುವುದನ್ನು ಆಕ್ರೋಶ, ನೋವು, ಹೆಮ್ಮೆಗಳಿಂದ ಸಮ್ಮಿಲನಗೊಂಡ ಮನಸ್ಸಿಂದ ವ್ಯಕ್ತಪಡಿಸಿಕೊಳ್ಳುತ್ತಾರೆ ಗಣೇಶ್.
ಪವಾಡ ಬಯಲು ಕಾರ್ಯಕ್ರಮಗಳಿಂದ ಜಾದೂ ಕಲೆಗೆ ತೊಂದರೆಯಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುದ್ರೋಳಿ ಗಣೇಶ್ ಜನರ ಮೂಢ ನಂಬಿಕೆಗಳನ್ನು ದೂರ ಮಾಡಿ ಅವರಲ್ಲಿ ವೈಜ್ನಾನಿಕ ಮನೋಭಾವವನ್ನು ಬೆಳೆಸುವ ಮಹತ್ವದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಪವಾಡ ಬಯಲು ಕಾರ್ಯಕ್ರಮದ ಬುದ್ದಿಜೀವಿಗಳು ಒಂದೆಡೆಯಾದರೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಪ್ರಚಾರ ಗಿಟ್ಟಿಸಿಕೊಳ್ಳಬೇಕು, ದುಡ್ದು ಮಾಡಬೇಕು ಅನ್ನುವ ಉದ್ದೇಶವನ್ನು ಮುಂದಿಟ್ಟುಕೊಂಡು ನಕಲಿ ಪವಾಡ ಬಯಲು ಮಾಡುವವರು ಬೆಳೆಯುತ್ತಿದ್ದಾರೆ.ಇವರಿಗೆ ಜನರಿಗೆ ಒಳ್ಳೆದು ಮಾಡುವ ಉದ್ದೇಶ ಇರುವುದಿಲ್ಲ ಇವರು ಕೇವಲ ಪ್ರಚಾರಕ್ಕಾಗಿ ಜಾದೂ ತಂತ್ರಗಳನ್ನೆ ಬಯಲು ಮಾಡಿ ಅದು ಯಾರೋ ಮಾಡಿರುವ ಪವಾಡ ಎಂದು ತಪ್ಪು ಮಾಹಿತಿ ನೀಡುತ್ತಿದಾರೆ ಎಂದು ಉತ್ತರಿಸಿದರು ಕುದ್ರೋಳಿ.
ಜಾದು ಕಲೆ ಯಾವತ್ತೂ ಸಾಯೋದಿಲ್ಲ ಆದರೆ ಅದನ್ನು ಪ್ರದರ್ಶನ ಮಾಡುವ ಕಲಾವಿದರರಿಗೆ ಸರಿಯಾದ ಅವಕಾಶ ಸಿಗದೇ ಹೋದರೆ ಆತ ಮೂಲೆಗುಂಪಾಗುವ ಸಾಧ್ಯತೆ ಇದೆ, ಆಗ ಜಾದು ಕಲೆಯ ಪ್ರದರ್ಶನಗಳು ವಿರಳವಾಗುತ್ತದೆ ಎಂದು ಹೇಳಿದ ಕುದ್ರೋಳಿ ಗಣೇಶ್ ಜನರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಜಾದು ಕಲಾವಿದರೂ ತಮ್ಮ ಪ್ರದರ್ಶನವನ್ನು ಉನ್ನತ ದರ್ಜೆಗೆ ಏರಿಸುವ ಕೆಲಸ ಮಾಡಲಿ ಆ ಮೂಲಕ ಜಾದು ಕಲೆಯ ಜನಪ್ರಿಯತೆ ಮತ್ತಷ್ಟು ಹೆಚ್ಚುವಂತಾಗಲಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.