Advertisement

ಅ.ಭಾ. ಅಂತರ್‌ ವಿ.ವಿ. ಬಾಲ್‌ ಬ್ಯಾಡ್ಮಿಂಟನ್‌ : ಮೇಲುಗೈ ಸಾಧಿಸಿದ ಮಂಗಳೂರು ವಿ.ವಿ.

11:34 PM Jan 16, 2023 | Team Udayavani |

ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖೀಲ ಭಾರತ ಅಂತರ್‌ ವಿ.ವಿ. ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಮಂಗಳೂರು ವಿ.ವಿ. ತಂಡವು ಸೆಮಿಫೈನಲ್‌ ಲೀಗ್‌ನಲ್ಲಿ ಮೇಲುಗೈ ಸಾಧಿಸಿದೆ.

Advertisement

ಕ್ವಾರ್ಟರ್‌ಫೈನಲ್‌ನಲ್ಲಿ ಅಣ್ಣಾಮಲೈ ವಿ.ವಿ. ಯನ್ನು ಮಣಿಸಿ ಸೆಮಿಫೈನಲ್‌ ಲೀಗ್‌ ಹಂತಕ್ಕೇರಿದ ಮಂಗಳೂರು ವಿ.ವಿ. ತಂಡವು ಅಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಂಧ್ರ ವಿ.ವಿ. ತಂಡವನ್ನು 35-29, 35-25 ಅಂಕಗಳಿಂದ ಮಣಿಸಿದೆ. ಇನ್ನೊಂದು ಲೀಗ್‌ ಪಂದ್ಯದಲ್ಲಿ ಎಸ್‌ಆರ್‌ಎಂ ತಂಡವು ಅಣ್ಣಾ ವಿ.ವಿ. ತಂಡವನ್ನು 35-15, 35-27 ಅಂಕಗಳಿಂದ ಸೋಲಿಸಿತ್ತು.

ಈ ಮೊದಲು ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಅಣ್ಣಾ ವಿ.ವಿ. ತಂಡವು ಬಿ.ಎಸ್‌. ಅಬ್ದುಲ್‌ ರಹ್ಮಾನ್‌ ಕ್ರೆಸೆಂಟ್‌ ವಿ.ವಿ.ಯನ್ನು 35-28, 32-35, 35-19 ಅಂಕಗಳಿಂದ, ಮಂಗ ಳೂರು ವಿ.ವಿ. ತಂಡವು ಅಣ್ಣಾಮಲೈ ವಿ.ವಿ.ಯನ್ನು 35-21, 35-30 ಅಂಕಗಳಿಂದ ಮಣಿಸಿ ಲೀಗ್‌ ಪ್ರವೇಶಿಸಿದವು. ಆಂಧ್ರ ವಿ.ವಿ. ತಂಡವು ಮದ್ರಾಸ್‌ ವಿ.ವಿ. ತಂಡವನ್ನು 20-35, 35-29, 35-21 ಅಂಕಗಳಿಂದ, ಎಸ್‌ಆರ್‌ಎಂ ತಂಡವು ಭಾರತೀಯರ್‌ ವಿ.ವಿ. ತಂಡವನ್ನು 37-35, 35-19 ಅಂಕಗಳಿಂದ ಮಣಿಸಿ ಸೆಮಿಫೈನಲ್‌ನ ಲೀಗ್‌ ಹಂತಕ್ಕೆ ಪ್ರವೇಶಿಸಿದವು.

ಬೆಳಗ್ಗೆ ನಡೆದ ಪ್ರೀ -ಕ್ವಾರ್ಟರ್‌ ಫೈನಲ್‌ನಲ್ಲಿ ಅಣ್ಣಾ ವಿ.ವಿ. ತಂಡವು ಕೇರಳ ವಿ.ವಿ. ತಂಡವನ್ನು ಮಣಿಸಿತು. ಅಣ್ಣಾಮಲೈ ವಿ.ವಿ. ತಂಡವು ಆಚಾರ್ಯ ನಾಗಾರ್ಜುನ ವಿ.ವಿ.ಯನ್ನು, ಮದ್ರಾಸ್‌ ವಿ.ವಿ. ತಂಡವು ಭಾರತೀದಾಸ್‌ ವಿ.ವಿ.ಯನ್ನು ಹಾಗೂ ಭಾರತೀಯಾರ್‌ ವಿ.ವಿ. ತಂಡವು ಪೆರಿಯಾರ್‌ ವಿ.ವಿ. ತಂಡವನ್ನು ಅಂಕಗಳಿಂದ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next