ಕಾಸರಗೋಡು: ಲೋಕಸಭೆ ಚುನಾವಣೆಯ ಜಿಲ್ಲಾ ಮಟ್ಟದ ಮತದಾನ ನಡೆದ ವೇಳೆ ಇಲ್ಲಿನ 43 ಸೂಕ್ಷ್ಮ ಮತಗಟ್ಟೆಗಳ ಚಟುವಟಿಕೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ|ಡಿ.ಸಜಿತ್ ಬಾಬು ಮತ್ತು ತಂಡ ತೀವ್ರನಿಗಾ ಇರಿಸಿತ್ತು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಸೂಕ್ಷ¾ ಮತಗಟ್ಟೆಗಳೆಂದು ಗುರುತಿಸಲಾದ ಎಲ್ಲ ಮತಗಟ್ಟೆಗಳನ್ನು ತೀವ್ರವಾಗಿ ನಿಗಾ ಇರಿಸಲಾಗಿತ್ತು. ಜಿಲ್ಲಾ ಮಟ್ಟದ ನಿರೀಕ್ಷಕ ಎಸ್.ಗಣೇಶ್, ಜಿಲ್ಲಾ ಪೊಲೀಸ್ ನಿರೀಕ್ಷಕ ಓಪ್ರಕಾಶ್ ತ್ರಿಪಾಠಿ, ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್, ಕಿರಿಯ ವರಿಷ್ಠಾಧಿಕಾರಿ ಗೋವಿಂದನ್ ರಾವಣೇಶ್ವರಂ ಈ ನೇರ ಪ್ರಸಾರ ಸಹಿತ ನಿಗಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
ಸೂಕ್ಷ್ಮ ಮತಗಟ್ಟೆಗಳಲ್ಲಿ ಅಳವಡಿಸಿದ ವೆಬ್ ಕೆಮೆರಾಗಳ ಮೂಲಕ ನಿಯಂತ್ರಣ ಕೊಠಡಿಯಲ್ಲಿ ಮತದಾನ ಸಂಬಂಧ ಚಟುವಟಿಕೆಗಳ ನೇರ ಪ್ರಸಾರ ನಡೆದಿತ್ತು. ಬೂತ್‌ಗಳಲ್ಲಿ ಪ್ರಿಸೈಡಿಂಗ್ ಅಧಿಕಾರಿ ಬಳಿ ಸ್ಥಾಪಿಸಲಾದ ವೆಬ್ ಕೆಮರಾ, ಮತದಾರ ಮತಗಟ್ಟೆಗೆ ಪ್ರವೇಶಿಸಿದ ಅನಂತರ ನಡೆಸುವ ಎಲ್ಲ ಚಟುವಟಿಕೆಗಳನ್ನು ದಾಖಲಿಸಲಾಗಿತ್ತು. ಬೂತ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಮತದಾತರು ಪ್ರವೇಶಿಸಿದ ಇತ್ಯಾದಿ ಘಟನೆ ನಡೆದ ವೇಳೆ ಈ ಸಂಬಂಧ ನಿಯಂತ್ರಣ ಆದೇಶ ಸಹಿತ ವಿಚಾರ ವಿನಿಮಯವನ್ನು ವಾರ್ತಾವಿನಿಮಯ ಸೌಲಭ್ಯಗಳ ಮೂಲಕ ಜಿಲ್ಲಾಧಿಕಾರಿ ಆಯಾ ಪ್ರಿಸೈಡಿಂಗ್ ಅಧಿಕಾರಿಗೆ ನೀಡಿದ್ದರು.
ಯಾವುದಾದರೂ ಮತಗಟ್ಟೆಗಳ ಚಟುವಟಿಕೆಗಳನ್ನು ಹೆಚ್ಚುವರಿ ಸೂಕ್ಷ¾ವಾಗಿ ಪರಿಶೀಲಿಸಬೇಕಾಗಿ ಬಂದಲ್ಲಿ, ಅದನ್ನು ದೊಡ್ಡ ಗಾತ್ರದಲ್ಲಿ ವೀಕ್ಷಿಸುವ ನಿಟ್ಟಿನಲ್ಲಿ ಎರಡು ಪ್ರಾಜೆಕ್ಟರ್ ಬಳಸಿ, ದೊಡ್ಡ ಸ್ಕ್ರೀನ್‌ನಲ್ಲಿ ಈಕ್ಷಿಸಲಾಗಿತ್ತು.
ಚುನಾವಣೆ ವಿಭಾಗ, ಜೀವವಿಮಾ ನಿಗಮ, ಬಿ.ಎಸ್.ಎನ್.ಎಲ್ ಸಹಿತ ವಿಭಾಗಗಳ ಸಿಬಂದಿ ಸೇರಿ 20ಕ್ಕೂ ಅಧಿಕ ಮಂದಿ ನಿಯಂತ್ರಣ ಕೊಠಡಿಯ ಕರ್ತವ್ಯದಲ್ಲಿದ್ದರು.
ಅಕ್ಷಯ ಸಂಸ್ಥೆ ವೆಬ್ ಕಾಸ್ಟಿಂಗ್‌ನ ಹೊಣೆ, ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸೌಲಭ್ಯ ಒದಗಿಸಿದ್ದರು. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ 4, ಉದುಮಾದಲ್ಲಿ 3, ಕಾಂಞಂಗಾಡ್ ನಲ್ಲಿ 13, ತ್ರಿಕರಿಪುರದಲ್ಲಿ 23 ಸೂಕ್ಷ್ಮ ಮತಗಟ್ಟೆಗಳಿದ್ದುವು.