ಬೆಂಗಳೂರು: ಹಿಂದೂಗಳಿಗೆ ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ಬುದ್ಧಿಜೀವಿಗಳಿಂದ ಅಪಾಯವಿದೆ ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲವ್ ಜಿಹಾದ್, ಭೂ ಜಿಹಾದ್, ಡ್ರಗ್ಸ್ ಮಾರಾಟ ಮುಂತಾದ ಚಟುವಟಿಕೆ ಮೂಲಕ ಮುಸಲ್ಮಾನರು ಒಡ್ಡುತ್ತಿರುವ ಅಪಾಯದ ನೇರ ಅನುಭವ ನಮಗೆ ಆಗುತ್ತಿದೆ. ಆದರೆ ಕ್ರಿಶ್ಚಿಯನರು ಒಳಗಿಂದೊಳಗೆ ಭಾರತದ ಮೇಲೆ ಮಸಲತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮತಾಂತರ ನಿಷೇಧ ಮಾಡಲು ಹೊರಟರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಮಸಿ ಬಳಿಯಲು ಕ್ರಿಶ್ನಿಯನ್ನರು ಯತ್ತಿಸುತ್ತಾರೆ. ಬುದ್ಧಿಜೀವಿಗಳು ಅತಿ ಅಪಾಯಕಾರಿಯಾಗಿದ್ದು ತರುಣರ ಮೆದುಳಿಗೆ ಕೈಹಾಕಿ ನಮ್ಮ ಪರಂಪರೆಯ ಮೇಲೆ ಕೀಳು ಅಭಿಪ್ರಾಯ ಉಂಟು ಮಾಡಲು ಯತ್ನಿಸು ತ್ತಿದ್ದಾರೆ. ಬೇರೆ ದೇಶಗಳಲ್ಲಿ ಪರಸ್ಪರ ಕಚ್ಚಾಡುವ ಈ ಮೂವರು ಭಾರತದಲ್ಲಿ ಒಂದಾಗಿ ಪರಂಪರೆಯೊಂದಿಗಿನ ಹಿಂದೂಗಳ ಸಂಬಂಧವನ್ನು ತುಂಡರಿಸಲು ಪ್ರಯತ್ನಿಸುತ್ತಿದ್ದಾರೆಂದು ಕಿಡಿಕಾರಿದರು.
ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 2011ರಲ್ಲಿ ಮುಸಲ್ಮಾನರ ಜನಸಂಖ್ಯೆ 18 ಲಕ್ಷ ಇದ್ದದ್ದು 2021ರ ಹೊತ್ತಿಗೆ 45 ಲಕ್ಷಕ್ಕೆ ಜಿಗಿದಿದೆ. ಮುಸಲ್ಮಾನರು ತಮ್ಮ ಮತ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ಬೆಂಗಳೂರಿನಲ್ಲೂ ಉತ್ತರ ಕನ್ನಡದಲ್ಲೂ ಮತದಾರರಾಗಿದ್ದುಕೊಂಡು ಚುನಾವಣೆಯ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ, ಎರಡನೇ ಹಂತದಲ್ಲಿ ಉತ್ತರ ಕನ್ನಡಕ್ಕೆ ಹೋಗಿ ಮತ ಚಲಾಯಿಸಿ ರಾಜಕೀಯ ಸಾಮರ್ಥ್ಯ ತೋರ್ತುದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
Related Articles
ಹಲಾಲ್ ನಿಗ್ರಹ ಮಸೂದೆ ಕರ್ನಾಟಕದಲ್ಲಿ ವಿಧಾನ ಮಂಡಲದಲ್ಲಿ ಮಂಡನೆ ಆಗುವಂತೆ ಸಂಘಟಿತವಾಗಿ ಹೋರಾಟ ನಡೆಸಬೇಕು. ಹಿಂದೂಗಳಿಗೆ ಹಿಂದೂ ದೇವರು ಮತ್ತು ದೇವರ ಅವತಾರಗಳು ಮಾತ್ರ ಆದರ್ಶ ವಾಗಬೇಕೇ ಹೊರತು ಸಿನಿಮಾ ನಟರಲ್ಲ ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ ಹೇಳಿದರು.
ಲೇಖಕಿ ಎಸ್.ಆರ್.ಲೀಲಾ ಮಾತನಾಡಿ, ಹಿಂದೂಗಳಲ್ಲಿ ಪರಸ್ಪರ ದ್ವೇಷ ನಿರ್ಮಾಣ ಮಾಡಲು ಜಾತಿಯ ಹೆಸರಿನಲ್ಲಿ ಬೇರ್ಪಡಿಸಲಾಗುತ್ತಿದೆ. ಹಿಂದೂಗಳು ಇದರ ವಾಸ್ತವಿಕತೆಯನ್ನರಿತು ಜಾತಿ ಬೇಧವನ್ನು ಮರೆತು ಒಗ್ಗೂಡಬೇಕು ಎಂದು ಹೇಳಿದರು.