Advertisement

ಸಮಗ್ರ ನೀರಾವರಿಗೆ ಕ್ರಮ 

09:29 AM Aug 03, 2017 | Team Udayavani |

ಹಟ್ಟಿ ಚಿನ್ನದ ಗಣಿ: ಲಿಂಗಸುಗೂರು ಮತಕ್ಷೇತ್ರವನ್ನು ಸಮಗ್ರ ನೀರಾವರಿಗೊಳಪಡಿಸಿ ರೈತರ ಬದುಕು ಬಂಗಾರವಾಗಲು ನೀರಾವರಿ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್‌ ಹೇಳಿದರು.

Advertisement

ಜಿಲ್ಲಾ ಪಂಚಾಯ್ತಿ ರಾಯಚೂರು, ಕೃಷ್ಣಾ ಭಾಗ್ಯ ಜಲ ನಿಗಮ, ಕ್ಯಾಸುಟೆಕ್‌ ಏಜೆನ್ಸಿ ವತಿಯಿಂದ ಬುಧವಾರ ಸಮೀಪದ ಗೆಜ್ಜಲಗಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಗೆಜ್ಜಲಗಟ್ಟಾ-ನಿಲೋಗಲ್‌ ಗ್ರಾಮಗಳು ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಮಕ್ಕಳಿಗೆ ಅನುಕೂಲಕ್ಕಾಗಿ ಕಾಲೇಜು ಹಾಗೂ ವಸತಿ ನಿಲಯಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಮಂಜೂರಿಯಾಗುವ ಭರವಸೆ ಇದೆ ಎಂದರು.

ಗೆಜ್ಜಲಗಟ್ಟಾ, ಹಿರೇಹೆಸರೂರು, ನಿಲೋಗಲ್‌, ಕರಡಕಲ್‌, ಗೊರೇಬಾಳ ತಾಂಡಾ, ಚಿತ್ತಾಪುರ, ಗೌಡೂರು, ಗುರುಗುಂಟಾ, ಕೋಠಾ, ಕಡ್ಡೋಣಿ, ಬಂಡೇಬಾವಿ ಸೇರಿ 36 ಹಳ್ಳಿಗಳಲ್ಲಿ ಎಚ್‌ಕೆಆರ್‌ಡಿಬಿ ಯೋಜನೆಯಡಿ 60 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ, ಆರ್‌ಐಡಿಎಫ್‌-19 
ಯೋಜನೆಯಡಿ ಗೆಜ್ಜಲಗಟ್ಟಾದಲ್ಲಿ 26 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಾಣ, 2016-17ನೇ ಸಾಲಿನ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಎಸ್‌ಇಪಿ ಯೋಜನೆಯಡಿ 1.87 ಕೋಟಿ ವೆಚ್ಚದಲ್ಲಿ ನೀರಾವರಿ ಸೌಕರ್ಯ, ಟಿಎಸ್‌ಪಿ ಯೋಜನೆಯಡಿ 4.81 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ನೀರಾವರಿ ಸೌಕರ್ಯದ ಕಾಮಗಾರಿಗಳಿಗೆ ಶಾಸಕ ಮಾನಪ್ಪ ವಜ್ಜಲ್‌ ಚಾಲನೆ ನೀಡಿದರು.

ತಾಪಂ ಅಧ್ಯಕ್ಷೆ ಶ್ವೇತಾ ಯಂಕನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಪುಷ್ಪಾ ಶಿವಯ್ಯ, ಮುಖಂಡರಾದ ಲಿಂಗರಾಜ ಭೂಪಾಲ, ಗಿರಿಮಲ್ಲನಗೌಡ, ಗುಂಡಪ್ಪ ಗೌಡ ಪೊಲೀಸ್‌ ಪಾಟೀಲ, ಎಪಿಎಂಸಿ ನಿರ್ದೇಶಕ ಅಮರೇಶ ದೊಡ್ಡಪ್ಪ, ಯಂಕನಗೌಡ ಐದನಾಳ, ಶರಣಬಸವ ಗುಡದನಾಳ,
ಅಮರಪ್ಪ ಗೆಜ್ಜಲಗಟ್ಟಾ, ಅಧಿಕಾರಿಗಳಾದ ಕೆಬಿಜೆಎಲ್‌ನ ಹರ್ಷ, ಜಿಪಂ ಎಇಇ ಅಭಿದಲಿ, ಪಶು ವೈದ್ಯಾಧಿ]ಕಾರಿ ಡಾ| ರಾಚಪ್ಪ, ಚಿದಾನಂದ ಕ್ಯಾಸುಟೆಕ್‌ ಅಧಿಕಾರಿಗಳು ಇದ್ದರು. 

ಮೆರವಣಿಗೆ: ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಶಾಸಕ ಮಾನಪ್ಪ ವಜ್ಜಲ್‌ ಅವರನ್ನು ಗೆಜ್ಜಲಗಟ್ಟಾ ಗ್ರಾಮಸ್ಥರು ಭಾಜಾ, ಭಜಂಂತ್ರಿಯೊಂದಿಗೆ ಸ್ವಾಗತಿಸಿ ಮೆರವಣಿಗೆ ಮಾಡಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next