Advertisement

1.90 ಕೋ.ರೂ. ವಿಮಾ ಮೊತ್ತಕ್ಕಾಗಿ ಅಪಘಾತದಂತೆ ಬಿಂಬಿಸಿ ಪತ್ನಿಯನ್ನೇ ಕೊಲೆಗೈದ ಪತಿ

05:52 PM Dec 01, 2022 | Team Udayavani |

ಜೈಪುರ: ಪತ್ನಿಯ ಹೆಸರಿನಲ್ಲಿದ್ದ 1.90 ಕೋಟಿ ರೂಪಾಯಿ ಮೌಲ್ಯದ ವಿಮಾ ಮೊತ್ತವನ್ನು ಪಡೆಯಲು ಪತಿಯೇ ತನ್ನ ಪತ್ನಿಯನ್ನು ಅಪಘಾತದಂತೆ ಬಿಂಬಿಸಿ ಕೊಲೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ಬುಧವಾರ ನಡೆದಿದೆ.

Advertisement

ಮೃತ ಮಹಿಳೆಯನ್ನು ಶಾಲು ಎನ್ನಲಾಗಿದೆ. ಅಲ್ಲದೆ ಪತಿ ತನ್ನ ಪತ್ನಿಯನ್ನು ಕೊಲ್ಲಲು ಓರ್ವ ರೌಡಿ ಶೀಟರ್ ಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ.

ಅದರಂತೆ ಅಕ್ಟೋಬರ್ 5 ರಂದು ಪತಿ ಮಹೇಶ್ ಚಂದ್ ಒತ್ತಾಯದ ಮೇರೆಗೆ ಪತ್ನಿ ಶಾಲು ತನ್ನ ಸೋದರ ಸಂಬಂಧಿ ಯುವಕನ ಜೊತೆ ಮುಂಜಾನೆ 4.45 ವೇಳೆಗೆ ಬೈಕ್ ನಲ್ಲಿ ಹನುಮಂತ ದೇವಸ್ಥಾನಕ್ಕೆ ಹೊರಟಿದ್ದಾರೆ ಈ ವೇಳೆ ರೌಡಿ ಶೀಟರ್ ಹಾಗೂ ಆತನ ಇಬ್ಬರು ಸಹಚರರು ಕಾರು ಚಲಾಯಿಸಿಕೊಂಡು ಪತ್ನಿ ಶಾಲು ಪ್ರಯಾಣಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಶಾಲು ಸ್ಥಳದಲ್ಲೇ ಸಾವನ್ನಪ್ಪಿದ್ದರೆ , ಸೋದರ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಮೇಲ್ನೋಟಕ್ಕೆ ಇದು ರಸ್ತೆ ಅಪಘಾತದಂತೆ ಕಂಡುಬಂದರೂ ಪೊಲೀಸರ ತನಿಖೆಯ ವೇಳೆ ಪತಿ ತಾನು ಪತ್ನಿಯ ಹೆಸರಿನಲ್ಲಿದ್ದ ವಿಮಾ ಮೊತ್ತ ಪಡೆಯಲು ಅಪಘಾತದಂತೆ ಬಿಂಬಿಸಿ ಪತ್ನಿಯನ್ನು ಕೊಲೆಗೈದಿರುವುದಾಗಿ ಹೇಳಿಕೊಂಡಿದ್ದಾನೆ, ಅಲ್ಲದೆ ಇದಕ್ಕಾಗಿ ರೌಡಿ ಶೀಟರ್ ಓರ್ವನಿಗೆ ಹತ್ತು ಲಕ್ಷಕ್ಕೆ ಗುತ್ತಿಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಅದರಂತೆ ಪತ್ನಿಯನ್ನು ದೇವಸ್ಥಾನಕ್ಕೆ ಸೋದರ ಸಂಬಂಧಿ ಯುವಕನ ಜೊತೆ ಹೋಗುವಂತೆ ಒತ್ತಾಯಿಸಿ ಆಮೇಲೆ ಅವರ ಮೇಲೆ ಕಾರು ಹರಿಸಿ ಕೊಲೆಗೈದು ಆಕೆಯ ಹೆಸರಿನಲ್ಲಿದ್ದ 1.90 ಕೋ.ರೂ. ವಿಮಾ ಮೊತ್ತವನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಆಲೋಚನೆ ಮಾಡಿಕೊಂಡಿದ್ದೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

Advertisement

ಶಾಲು 2015 ರಲ್ಲಿ ಚಂದ್ ಅವರನ್ನು ಮದುವೆಯಾಗಿದ್ದು ಒಂದು ಹೆಣ್ಣು ಮಗು ಇದೆ. ಆದರೆ ಮದುವೆಯಾದ ಎರಡು ವರ್ಷಗಳ ನಂತರ ಅವರಿಬ್ಬರ ನಡುವೆ ಜಗಳ ಶುರುವಾಗಿ ಬಳಿಕ ಶಾಲು ತನ್ನ ಮಗುವಿನೊಂದಿಗೆ ತಾಯಿ ಮನೆಯಲ್ಲೇ ವಾಸವಾಗಿದ್ದರು. ಈ ನಡುವೆ ಚಾಂದ್ ಶಾಲು ಹೆಸರಿನಲ್ಲಿ ವಿಮೆ ಮಾಡಿಸಿದ್ದ ಒಂದು ವೇಳೆ ವಿಮೆ ಮಾಡಿದವರು ಅಪಘಾತದಲ್ಲಿ ಸತ್ತರೆ ಅವರ ಪತಿಗೆ 1.90 ಕೋಟಿ ಮೌಲ್ಯದ ವಿಮೆ ಸೇರುತ್ತದೆ ಎಂದು ಚಾಂದ್ ಗೆ ಗೊತ್ತಿತ್ತು ಹಾಗಾಗಿ ಹೇಗಾದರೂ ಮಾಡಿ ಪತ್ನಿಯನ್ನು ಅಪಘಾತದ ರೀತಿಯಲ್ಲಿ ಕೊಲೆಗೈದು ವಿಮೆ ಮೊತ್ತವನ್ನು ಪಡೆಯಬೇಕೆಂದು ಶಾಲು ಬಳಿ ಹೊಸ ಉಪಾಯ ಮಾಡಿದ್ದಾನೆ ಅದೇನೆಂದರೆ ತಾನೊಂದು ಕೆಲಸಕ್ಕೆ ಕೈ ಹಾಕಿದ್ದು ಅದು ಈಡೇರಬೇಕಾದರೆ ನೀನು ನಿರಂತರ ಹನ್ನೊಂದು ದಿನಗಳ ಕಾಲ ಬೈಕ್ ನಲ್ಲಿ ಹನುಮಂತ ದೇವಸ್ಥಾನಕ್ಕೆ ಹೋಗಿ ಬರಬೇಕೆಂದು ಪತ್ನಿ ಬಳಿ ಹೇಳಿಕೊಂಡಿದ್ದ, ಅದರಂತೆ ಪತ್ನಿ ಶಾಲು ಹನ್ನೊಂದು ದಿನಗಳ ವೃತ ಆಚರಿಸಲು ಬೆಳಿಗ್ಗೆ ಎದ್ದು ಸೋದರ ಸಂಬಂಧಿ ಯುವಕನ ಜೊತೆ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿದ್ದಾಳೆ ಹಾಗೆ ಮೊದಲ ದಿನ ಬೈಕ್ ನಲ್ಲಿ ದೇವಸ್ಥಾನಕ್ಕೆ ಹೋಗುವ ವೇಳೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ, ಸದ್ಯ ಆರೋಪಿ ಪತಿ ಚಾಂದ್ ಹಾಗೂ ಹತ್ಯೆಗೆ ಗುತ್ತಿಗೆ ಪಡೆದ ಮೂವರು ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಗೆ ಟೀಕೆ ; ಇಸ್ರೇಲಿ ನಿರ್ಮಾಪಕಗೆ ಅನುಪಮ್ ಖೇರ್ ತಿರುಗೇಟು

Advertisement

Udayavani is now on Telegram. Click here to join our channel and stay updated with the latest news.

Next