Advertisement

ಕಿಮ್ಮನೆ ಪಾದಯಾತ್ರೆ: ಕನ್ನಡ ಧ್ವಜಕ್ಕೆ ಅಪಮಾನ!

11:12 AM Jun 16, 2022 | Team Udayavani |

ತೀರ್ಥಹಳ್ಳಿ: ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ತೀರ್ಥಹಳ್ಳಿಯಲ್ಲಿ ಬುಧವಾರ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ  ನಡೆದ ಬೃಹತ್ ಪ್ರತಿಭಟನಾ ಪಾದಯಾತ್ರೆಯಲ್ಲಿ ಕನ್ನಡ ಧ್ವಜಕ್ಕೆ ಅಪಮಾನ ಮಾಡಲಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

Advertisement

ಪಾದಯಾತ್ರೆಯಲ್ಲಿ ನೂರಾರು ಅಡಿ ಉದ್ದದ ಕನ್ನಡ ಧ್ವಜವನ್ನು ಹಿಡಿದು ಬಂದಿದ್ದು, ಈ ವೇಳೆ ಮೇಲಿನಕುರುವಳ್ಳಿಯಲ್ಲಿ ಕನ್ನಡ ಧ್ವಜವನ್ನು ನೆಲದ ಮೇಲೆ ಹಾಕಿ ಅಪಮಾನ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದೆ. ಆದರೂ ಸಹ ಕನ್ನಡ ಪರ ಸಂಘಟನೆಗಳು ಸುಮ್ಮನೆ ಕುಳಿತಿರುವುದು ಯಾಕೆ ಎಂಬ ಪ್ರಶ್ನೆ ಹಲವರಲ್ಲಿ ಚರ್ಚೆಯಾಗತೊಡಗಿದೆ.

ಇದನ್ನೂ ಓದಿ:ಮಂಗಳೂರು: ಬಾಲ್ಕನಿಯ ಕರ್ಟನ್‌ ಸರಿಪಡಿಸುವ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಮೆರವಣಿಗೆಯು ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸಾಂಸ್ಕೃತಿಕ ಮಂದಿರದವರೆಗೆ  ನಡೆಯಿತು. ಈ ಪ್ರತಿಭಟನಾ ಪಾದಯಾತ್ರೆಯಲ್ಲಿ ಕನ್ನಡ ಪರ ಸಂಘಟನೆ, ಸಾಹಿತಿಗಳು ಸೇರಿ ಹಾಗೂ ಪಕ್ಷಾತೀತವಾಗಿ ಹಲವರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next