Advertisement

ಪ್ರಕೃತಿ ವಿಕೋಪ ನಿರ್ಲಕ್ಷಿಸದಿರಲು ಅಧಿಕಾರಿಗಳಿಗೆ ಸೂಚನೆ

08:02 AM May 28, 2020 | mahesh |

ಸಿದ್ದಾಪುರ: ಹವಾಮಾನ ಇಲಾಖೆ ವರದಿ ಪ್ರಕಾರ ಈ ಬಾರಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಪ್ರಕೃತಿ ವಿಕೋಪದ ಬಗ್ಗೆ ನಿರ್ಲಕ್ಷ ಬೇಡ. ಆ ಕುರಿತಂತೆ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ. ಯಾವುದೇ ಅಗತ್ಯವಿದ್ದರೂ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ. ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಾಯಕ ಕಮೀಷನರ್‌ ಡಾ|ಈಶ್ವರ ಉಳ್ಳಾಗಡ್ಡಿ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವರು ತಾಪಂ ಸಭಾಭವನದಲ್ಲಿ ನಡೆದ ಮಳೆಗಾಲದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ ಮಳೆಗಾಲದ ಮೊದಲು ರಸ್ತೆ ಪಕ್ಕದ ಗಟಾರಗಳ ಸ್ವತ್ಛತೆ, ರಸ್ತೆ ಅಕ್ಕಪಕ್ಕದ ಮರಗಳ ಟೊಂಗೆಗಳನ್ನು ಕತ್ತರಿಸಲು ಕ್ರಮ ತೆಗೆದುಕೊಳ್ಳಿ, ಮಳೆ, ಗಾಳಿಯಿಂದ ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗುವುದನ್ನು ಕೂಡಲೇ ಸರಿಪಡಿಸಿ. ಗುಡ್ಡ ಕುಸಿತ, ನೆರೆಹಾವಳಿ ಪ್ರದೇಶಗಳ ಬಗ್ಗೆ ನಿಗಾವಹಿಸಿ. ಪ್ರಕೃತಿ ವಿಕೋಪದ ಬಗ್ಗೆ ಯಾರೂ ನಿರ್ಲಕ್ಷ ವಹಿಸಬೇಡಿ. ಏನಾದರೂ ಅಗತ್ಯವಿದ್ದರೆ ನನ್ನನ್ನ, ತಹಶೀಲ್ದಾರರನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಿ ಎಂದರು.

ಕೋವಿಡ್‌-19 ಹಾಗೂ ಕೆಎಫ್‌ಡಿಗೆ ಸಂಬಂಧಿಸಿದಂತೆ ಶಿರಸಿ ಉಪವಿಭಾಗದ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಇದು ಮುಂದೆಯೂ ಇದೇ ರೀತಿ ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಈ ತಾಲೂಕಿನಲ್ಲಿಯೂ ಉತ್ತಮವಾದ ನಿರ್ವಹಣೆಯಾಗಿದೆ. ಹೊರ ರಾಜ್ಯದಿಂದ ಜನರು ಬರುತ್ತಿದ್ದು ಅವರನ್ನು ಕ್ವಾರಂಟೈನ್‌ ಮಾಡುವಲ್ಲಿ ಪಿಡಿಒಗಳ ಜವಾಬ್ದಾರಿ ಹೆಚ್ಚಿನದು. ಕೂಡಲೇ ಟಾಸ್ಕ್ ಫೋರ್ಸ್‌ ಸಭೆ ನಡೆಸಿ, ಇನ್ನು 3-4 ತಿಂಗಳು
ಹೆಚ್ಚಿನ ಲಕ್ಷ ವಹಿಸಬೇಕಿದೆ. ಯಾರೇ ಹೊರಗಿನಿಂದ ಬಂದರೂ ಆ ಬಗ್ಗೆ ತೀವ್ರ ನಿಗಾ ವಹಿಸಿ, ನಮ್ಮ ಗಮನಕ್ಕೆ ತನ್ನಿ ಎಂದರು. ಪಟ್ಟಣದಲ್ಲಿ ರಸ್ತೆ ಪಕ್ಕದ ಮರಗಳ ಅಡಚಣೆ ಮಾಡಬಹುದಾದ ಮರಗಳ ರೆಂಬೆಗಳನ್ನು ಕತ್ತರಿಸಲು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು. ತಹಶೀಲ್ದಾರ್‌ ಮಂಜುಳಾ ಭಜಂತ್ರಿ,
ತಾಪಂ ಇಓ ಪ್ರಶಾಂತರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next