Advertisement

ಸಾರ್ವಜನಿಕರಿಂದ ಪುರಸಭೆಗೆ ದಿಢೀರ್‌ ಮುತ್ತಿಗೆ

02:46 PM May 31, 2019 | Suhan S |

ಲಕ್ಷ್ಮೇಶ್ವರ: ಸ್ವಂತ ಸೂರು ಹೊಂದಲು, ಮನೆ ನಿರ್ಮಾಣಕ್ಕೆ ಅನುಮತಿ ಸೇರಿ ಇತರೇ ಕಾರಣಗಳಿಗಾಗಿ ಬೇಕಾಗುವ ಮನೆ ಉತಾರಕ್ಕಾಗಿ ಸಾರ್ವಜನಿಕರು ಕಳೆದ 5-6 ತಿಂಗಳಿಂದ ಅಲೆದಾಡುತ್ತಿದ್ದರೂ ಸ್ಪಂದಿಸದ ಪುರಸಭೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಗುರುವಾರ ದಢಿಧೀರ್‌ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದಲ್ಲಿ ಉತಾರಕ್ಕಾಗಿ ಸುಮಾರು 170ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಅದಕ್ಕೆ ಪುರಸಭೆ ಅಭಿಯಂತರರ ಸಹಿ ಅವಶ್ಯವಾಗಿರುತ್ತದೆ. ಕಳೆದ 5-6 ತಿಂಗಳಿಂದ ಬಹುತೇಕ ಅರ್ಜಿಗಳಿಗೆ ಸಹಿ ಆಗದಿದ್ದರಿಂದ ಅರ್ಜಿದಾರರು ಪದೇ ಪದೇ ಪುರಸಭೆಗೆ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.

ಬ್ಯಾಂಕ್‌ ಸಾಲ ಪಡೆದುಕೊಳ್ಳಲು, ನೀರು, ವಿದ್ಯುತ್‌ ಸಂಪರ್ಕ, ಸರ್ಕಾರಿ ಸೌಲತ್ತು, ರಹವಾಸಿ, ಆದಾಯ ಸರ್ಟಿಪಿಕೆಟ್ ಪಡೆದುಕೊಳ್ಳಲು ಸೇರಿ ಇತರೆ ಉದ್ದೇಶಕ್ಕಾಗಿ ಮನೆ ಉತಾರ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ನೀಡಿದ 3-4 ದಿನಗಳಲ್ಲಿ ಅರ್ಜಿದಾರರಿಗೆ ಕಂಪ್ಯೂಟರ್‌ ಉತಾರ ಪೂರೈಸಬಹುದಾಗಿದ್ದರೂ ಜನತೆ ತಿಂಗಳುಗಳಿಂದ ಪುರಸಭೆಗೆ ಅಲೆದಾಡುತ್ತಿದ್ದಾರೆ. ಸಿಬ್ಬಂದಿ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಉತಾರ ನೀಡಲು ಸತಾಯಿಸುತ್ತಿರುವುದರ ಹಿಂದೆ ಮತ್ತೇನೋ ಕಾರಣಗಳಿವೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಪುರಸಭೆಯಲ್ಲಿ ಉತಾರ ನೀಡುವುದಕ್ಕಾಗಿ ಸಿಬ್ಬಂದಿಗಳಿದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಳೆದ 10 ತಿಂಗಳ ಹಿಂದೆಯೇ ನೂತನ ಸದಸ್ಯರು ಆಯ್ಕೆಯಾಗಿದ್ದರೂ ಸರ್ಕಾರದ ದ್ವಂದ್ವ ನೀತಿಯಿಂದ ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ. ಇದರಿಂದ ಪುರಸಭೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಆಡಿದ್ದೇ ಆಟವಾಗಿದೆ. ಇದನ್ನು ಪರಿಹರಿಸಬೇಕಾದ ಹಿರಿಯ ಅಧಿಕಾರಿಗಳೂ ಜಾಣ ಮೌನ ವಹಿಸಿದ್ದಾರೆ. ಈ ರೀತಿ ವಿನಾಃಕಾರಣ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ. ನಿಯಮದಂತೆ ಉತಾರ ಪೊರೈಸಲು ಇರುವ ತೊಂದರೆಯಾದರೂ ಏನು ಎಂದು ಪ್ರಶ್ನಿಸಿದರು.

ಈಗ ಉತಾರಕ್ಕೆ ಅರ್ಜಿ ನೀಡಿರುವ ಸಾರ್ವಜನಿಕರಿಗೆ ಶುಕ್ರವಾರ ಉತಾರ ನೀಡುವಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅವರೊಂದಿಗೆ ಪುರಸಭೆ ಎದುರಿನಲ್ಲಿ ಧರಣಿ ಪ್ರಾರಂಭಿಸುವುದಾಗಿ ಎಚ್ಚರಿಸಿದರು. ಪುರಸಭೆ ಅಧಿಕಾರಿ ಎನ್‌.ಎಂ. ಹಾದಿಮನಿ ಈ ಕುರಿತಂತೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

Advertisement

ಸೋಮಪ್ಪ ಬೆಲ್ಲದ, ನಾಗಪ್ಪ ನುಚ್ಚಂಬಲಿ, ಬಸವರಾಜ ಹೊಸಮನಿ, ದೇವಪ್ಪ ನಾಯಕ, ಈರಣ್ಣ ಕರೆಯತ್ತಿನ, ಬಸಣ್ಣ ಓಂಕಾರಿ, ಬಸವರಾಜ ಅಕ್ಕಿ, ಬಸವರಾಜ ಅಂದಲಗಿ, ಗೌಸಮೋದಿನ ನಂದಿಗಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next