ಕರ್ಮ ಅನ್ನೋದು ಜಗತ್ತಿನ ಅಲಿಖೀತ ನಿಯಮ. ಜಗತ್ತಿನ ಯಾವ ಜೀವ ಜಂತುಗಳನ್ನು ಬೀಡದ ಕರ್ಮ ಮನುಷ್ಯನನ್ನು ಬಿಟ್ಟಿತೆ? ಇಂಥ ಒಂದು ವಿಭಿನ್ನ ವಿಷಯವನ್ನು ನಿರ್ದೇಶಕ ಸಂದೀಪ ಮಹಾಂತೇಶ “ಇನ್ ಸ್ಟಂಟ್‌ಕರ್ಮ’ ಸಿನಿಮಾಮಾದ ಮೂಲಕ ಈ ವಾರ ತೆರೆಮೇಲೆ ಹೇಳಲು ಹೊರಟಿದ್ದಾರೆ.
“ಬ್ರೇಕ್ ಫ್ರೀ ಸಿನಿಮಾಸ್’ ಬ್ಯಾನರನಲ್ಲಿ ಸಂತೋಷ್ ಮಹಾಂತೇಶ್ ನಿರ್ಮಿಸಿರುವ “ಇನ್‌ಸ್ಟಂಟ್‌ಕರ್ಮ’ ಚಿತ್ರ ಇದೇ, ಏ.1ಕ್ಕೆ ಬೆಳ್ಳಿ ತೆರೆಗೆ ಬರುತ್ತಿದೆ.ಕಳೆದಕೆಲ ವಾರದಿಂದ “ಇನ್ ಸ್ಟಂಟ್‌ಕರ್ಮ’ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ನಿರ್ದೇಶಕ ಸಂದೀಪ್ ತಮ್ಮ ಸಿನಿಮಾದ ಬಗ್ಗೆ ಹೀಗೆ ಮಾತನಾಡಿದ್ದಾರೆ.
“ಕರ್ಮ ಅಂದರೆ ನಾವು ಮಾಡುವ ಪ್ರತಿಯೊಂದು ಆ್ಯಕ್ಷನ್‌ಗೆ ಸಿಗುವ ರಿಯಾಕ್ಷನ್ ಎನ್ನಬಹುದು. ನಾವು ಒಳ್ಳೆದಯನ್ನು ಮಾಡಿದರೆ, ಒಳ್ಳೆಯ ಫಲವನ್ನೇ ನೀಡುತ್ತದೆ. ಕೆಟ್ಟದನ್ನು ಮಾಡಿದರೆಕೆಟ್ಟ ಪರಿಣಾಮಕಟ್ಟಿಟ್ಟ ಬುತ್ತಿ. ಇನ್ಸ್ಟಂಟ್ ಅಂದರೆ ಈಗ ಮಾಡಿದ ಕೆಲಸಕ್ಕೆ ಇಗಲೇ ಪ್ರತಿಫಲ. ಇಂದು ಜಗತ್ತು ತುಂಬಾ ಫಾಸ್ಟ್ ಆಗಿದೆ. ಹಾಗೆ ಕರ್ಮವೂ ಅಷ್ಟೇ ಕಾಲಕ್ಕೆ ತಕ್ಕಂತೆ ಬದಲಾಗಿ ಇಂದೇ ಪ್ರತಿಫಲ ನೀಡುತ್ತೆ. ಆದ್ದರಿಂದಲೇ ಈ ಸಿನಿಮಾದ ಟೈಟಲ್‌ನ “ಇನ್ಸ್ಟಂಟ್‌ಕರ್ಮ’ ಎಂದು ಇಡಲಾಗಿದೆ’ ಎಂಬುದು ನಿರ್ದೇಶಕ ಸಂದೀಪ ಮಹಾಂತೇಶ್ ಮಾತು.
“ಇನ್ಸ್ಟಂಟ್‌ಕರ್ಮ’ ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತಲ ಚಿತ್ರೀಕರಿಸಲಾಗಿದೆ. ಯಶ್ ಶೆಟ್ಟಿ, ಶ್ರೇಷ್ಠಕೆಂಡ, ಅಂಜನ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಧನಜಂಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯ್ಸ ಸಂಗೀತ ಸಂಯೋಜನೆ, ಭಾಸ್ಕರ್ ರೆಡ್ಡಿ ಛಾಯಾಗ್ರಹಣ, ಸುರೇಶ ಆರುಮುಗಂ ಸಂಕಲನವಿದೆ.
ಈಗಾಗಲೇ ಬಿಡುಗಡೆಯಾದ “ಇನ್ಸ್ಟಂಟ್‌ಕರ್ಮ’ದ ಪೋಸ್ಟರ್, ಟ್ರೇಲರ್‌ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ