Advertisement

ಕುಡಿಯುವ ನೀರಿನ ಘಟಕ ಸ್ಥಾಪನೆ

11:46 AM Jul 26, 2022 | Team Udayavani |

ಅಫಜಲಪುರ: ಸಾಮಾನ್ಯವಾಗಿ ಹುಟ್ಟು ಹಬ್ಬಗಳು ದುಂದು ವೆಚ್ಚಗಳ ಮೂಲಕ ಆಚರಿಸುತ್ತಿರುವುದು ಕಂಡು ಬರುತ್ತಿರುವ ಸನ್ನಿವೇಶಗಳಲ್ಲಿ ಉದ್ದಿಮೆದಾರ ಸಂತೋಷ ದಾಮಾ ಅವರು ತಮ್ಮ ಜನ್ಮ ದಿನವನ್ನು ಪ್ರಯುಕ್ತ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಚರಿಸಿಕ್ಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಯುವ ಉದ್ದಿಮೆದಾರ ಸಂತೋಷ ದಾಮಾ ಅವರು ತಮ್ಮ ತಂದೆಯವರಾದ ದಿ.ಮಲ್ಲಿಕಾರ್ಜುನ ದಾಮಾ ಅವರ ಸ್ಮರಣಾರ್ಥಕವಾಗಿ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂತೋಷ ದಾಮಾ ಅವರು ಜನ ಸಾಮಾನ್ಯರ ಸಂಕಷ್ಟವನ್ನು ಅರಿತವರಾಗಿದ್ದಾರೆ. ಬಸ್‌ ನಿಲ್ದಾಣದಲ್ಲಿ ಎಲ್ಲರಿಗೂ ಅನುಕೂಲವಾಗಲೆಂದು ಕುಡಿಯುವ ನೀರಿನ ಘಟಕ ತೆರೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಸಮಾಜಿಕ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.

ಮುಖಂಡರಾದ ರಜಾಕ್‌ ಪಟೇಲ್‌, ಶರಣು ಶೆಟ್ಟಿ, ಅಲ್ತಾಫ್‌ ಪಟೇಲ್‌, ಚಂದು ಕರಜಗಿ, ಶಿವಪುತ್ರ ಸಂಗೋಳಗಿ, ಡಾ| ರಾಜು ಭೂತಿ, ಪ್ರಶಾಂತ ಹಿರೇಮಠ, ಚಂದ್ರಕಾಂತ ಅಂಬೂರೆ, ಗಂಗಾಧರ ಶ್ರೀಗಿರಿ, ಪ್ರಭಾವತಿ ಮೇತ್ರೆ ಸೇರಿದಂತೆ ಅನೇಕ ಮುಖಂಡರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next