Advertisement

ಇನ್‌ಸ್ಟಾಗ್ರಾಂನಲ್ಲಿ ವಿರಾಟ್‌, ಪ್ರಿಯಾಂಕಾಗೆ ಕೋಟಿ ಬೆಲೆ!

08:07 PM Jan 08, 2022 | Team Udayavani |

ನವದೆಹಲಿ: ಸಾಮಾಜಿಕ ಜಾಲತಾಣಗಳು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ. ಅದರಲ್ಲೂ ಇನ್‌ಸ್ಟಾಗ್ರಾಂ ಬಳಕೆಯಂತೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

Advertisement

ಸೆಲೆಬ್ರಿಟಿಗಳೂ ಇನ್‌ಸ್ಟಾಗ್ರಾಂ ಬಳಕೆಯಲ್ಲಿ ಮುಂದೇ ಇದ್ದು, ಅದರಿಂದಲೇ ಕೋಟ್ಯಂತರ ರೂಪಾಯಿ ದುಡಿಯುತ್ತಿದ್ದಾರೆ ಕೂಡ. 2021ರಲ್ಲಿ ಇನ್‌ಸ್ಟಾಗ್ರಾಂ ಸಂಸ್ಥೆ ಯಾವ ಸೆಲೆಬ್ರಿಟಿಗೆ ಎಷ್ಟು ಹಣ ಕೊಟ್ಟಿದೆ ಎನ್ನುವುದರ ಮಾಹಿತಿಯನ್ನು ಇದೀಗ ಹೊರಬಿಟ್ಟಿದೆ.

ಇನ್‌ಸ್ಟಾಗ್ರಾಂ ಪ್ರತಿ ಪೋಸ್ಟ್‌ಗೆ ನಿಖರ ಹಣವನ್ನು ಸೆಲೆಬ್ರಿಟಿಗಳಿಗೆ ಕೊಡುತ್ತದೆ. ಅದರಲ್ಲಿ ಪೋಸ್ಟ್‌ಗೆ ಅತಿ ಹೆಚ್ಚು ಹಣ ಪಡೆದಿರುವ 50 ಜಾಗತಿಕ ಸೆಲೆಬ್ರಿಟಿಗಳ ಪೈಕಿ ಭಾರತದ ಕ್ರಿಕೆಟ್‌ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಇದ್ದಾರೆ.

ಇದನ್ನೂ ಓದಿ:ಸಿಖ್‌ ವಿರೋಧಿ ಕ್ಯಾಬಿನೆಟ್‌ ಸಭೆ: ಮಾರ್ಫ್ ವಿಡಿಯೋದ ಮೂಲ ಪಾಕ್; ಪೊಲೀಸ್

ವಿರಾಟ್‌ ಕೊಹ್ಲಿಗೆ 2021ರಲ್ಲಿ ಪ್ರತಿ ಪೋಸ್ಟ್‌ಗೆ ಸಂಸ್ಥೆ ಬೋರೋಬ್ಬರಿ ತಲಾ 5 ಕೋಟಿ ರೂ. ಕೊಟ್ಟಿದೆಯಂತೆ. ಹಾಗೆಯೇ ಪ್ರಿಯಾಂಕಾ ಚೋಪ್ರಾಗೆ ಪ್ರತಿಯೊಂದು ಪೋಸ್ಟ್‌ಗೆ ತಲಾ 4 ಕೋಟಿ ರೂ. ಕೊಡಲಾಗಿದೆಯಂತೆ.
ಅತಿ ಹೆಚ್ಚು ಸಂಭಾವನೆ ಪಡೆದ ಗಣ್ಯರ ಪಟ್ಟಿಯಲ್ಲಿ ಪೋರ್ಚುಗೀಸ್‌ ಫ‌ುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇದ್ದಾರೆ. ಅವರಿಗೆ ಪ್ರತಿ ಪೋಸ್ಟ್‌ಗೆ 12 ಕೋಟಿ ರೂ. ಕೊಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next