ವಾಷಿಂಗ್ಟನ್: ಜನಪ್ರಿಯ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂ ಮೆಟಾ ಒಡೆತನದ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿರುವ ಕುರಿತು ವರದಿಯಾಗಿದೆ.
ಸರ್ವರ್ ಸ್ಥಗಿತ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್ ಡಿಟೆಕ್ಟರ್ ವರದಿ ಮಾಡಿರುವ ಪ್ರಕಾರ 46 ಸಾವಿರಕ್ಕೂ ಅಧಿಕ ಬಳಕೆದಾರರಿಗೆ ಇನ್ಸ್ಟಾಗ್ರಾಮ್ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಲ್ಲಿ 2000 ಕ್ಕೂ ಅಧಿಕ ಮಂದಿ ಅಮೆರಿಕಾದ ಬಳಕೆದಾರರು, 1000 ಕ್ಕೂ ಹೆಚ್ಚಿನ ಆಸ್ಟ್ರೇಲಿಯಾ, ಭಾರತದ ಬಳಕೆದಾರರಿಗೆ ಸರ್ವರ್ ಕನೆಕ್ಷನ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಶೇ.50 ಮಂದಿಗೆ ಸರ್ವರ್ ಕನೆಕ್ಷನ್ ಸಮಸ್ಯೆ ಕಾಣಿಸಿಕೊಂಡಿದ್ದು, ಶೇ.20 ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.