Advertisement

ಫುಲ್ ಸ್ಕ್ರೀನ್‌ ಫೀಡ್‌ ಅಪ್‌ಡೇಟ್‌ ಕೈಬಿಟ್ಟ ಇನ್‌ಸ್ಟಾಗ್ರಾಂ

09:33 PM Jul 29, 2022 | Team Udayavani |

ವಾಷಿಂಗ್ಟನ್‌: ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಪರೀಕ್ಷೆಯ ಹಂತದಲ್ಲಿದ್ದ “ಫುಲ್ ಸ್ಕ್ರೀನ್‌ ಫೀಡ್‌’ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.

Advertisement

ಈ ಅಪ್‌ಡೇಟ್‌ ಬಗ್ಗೆ ಋಣಾತ್ಮಕ ಪ್ರತಿಕ್ರಿಯೆಯೇ ಹೆಚ್ಚಾಗಿ ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಇನ್‌ಸ್ಟಾಗ್ರಾಂ ಮುಖ್ಯಸ್ಥ ಅದಮ್‌ ಮೊಸ್ಸೆರಿ ತಿಳಿಸಿದ್ದಾರೆ.

ಹಾಗೆಯೇ ಇನ್‌ಸ್ಟಾಗ್ರಾಂನ ಫೀಡ್‌ನ‌ಲ್ಲಿ ನಾವು ಫಾಲೋ ಮಾಡದವರ ವಿಡಿಯೋಗಳು ಹೆಚ್ಚಾಗಿ ಕಾಣಿಸುತ್ತಿವೆ. ನಮ್ಮ ಸ್ನೇಹಿತರು ಹಾಕಿದಂತಹ ಪೋಸ್ಟ್‌ಗಳು ಕಾಣುತ್ತಲೇ ಇಲ್ಲವೆಂದು ಅನೇಕರು ದೂರಿದ್ದು, ಈ ಸಮಸ್ಯೆಯನ್ನೂ ಸರಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next