Advertisement

ಕೆ.ಆರ್‌.ಪೇಟೆ ಬಸ್‌ ನಿಲ್ದಾಣ ಪರಿಶೀಲನೆ

03:20 PM May 28, 2022 | Team Udayavani |

ಕೆ.ಆರ್‌.ಪೇಟೆ: ಗುರುವಾರ ಅರ್ಧಗಂಟೆ ಸುರಿದ ಮಳೆಗೆ ಜಲಾವೃತ ಗೊಂಡಿದ್ದ ಪಟ್ಟಣದ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಪಂ ಸಿಇಒ ದಿವ್ಯಾ ಪ್ರಭು ಭೇಟಿ ನೀಡಿವೀಕ್ಷಣೆ ಮಾಡಿ, ಸಮಸ್ಯೆಗೆ ಶಾಶ್ವತ ಪರಿಹಾರಒದಗಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

Advertisement

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಪುರಸಭೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡವು ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಒತ್ತುವರಿ ತೆರವು ಮಾಡಿ: ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಪ್ರಾಕೃತಿಕ ವಿಕೋಪ ಆದಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಪುರಸಭೆ, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ನಿರ್ದೇಶನ ನೀಡಿದರು.

ಚನ್ನಪ್ಪನ ಕಟ್ಟೆಗೆ ಸೇರಿದ ಪ್ರದೇಶದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ.ಸ್ವಲ್ಪ ಮಳೆ ಬಂದರೆ ಸಾಕು ನಿಲ್ದಾಣದಲ್ಲಿ ಎರಡರಿಂದ ಮೂರು ಅಡಿ ನೀರು ನಿಲ್ಲುತ್ತದೆ. ಇದರಿಂದಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಪೈಪ್‌ ಅಳವಡಿಸಿ: ಮಳೆ ನೀರು ಸರಾಗವಾಗಿಹರಿದು ಹೋಗಲು ನಿಲ್ದಾಣದ ಪಕ್ಕದ ಏರಿಗೆ ದೊಡ್ಡ ಪೈಪ್‌ ಅಳವಡಿಸಿ, ತುರ್ತು ಕಾಮಗಾರಿನಡೆಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಶ್ವಥಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಈ ವೇಳೆ ತಹಶೀಲ್ದಾರ್‌ ಎಂ.ವಿ.ರೂಪಾ, ಪುರಸಭೆ ಮುಖ್ಯಾಧಿಕಾರಿ ಕುಮಾರ್‌, ತಾಪಂ ಇಒಸತೀಶ್‌, ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ಸಹಾಯಕ ಎಂಜಿನಿಯರುಗಳಾದ ಎಲೆಕೆರೆ ರವಿಕುಮಾರ್‌, ಮಧುಸೂದನ್‌, ಅರ್ಚನಾ ಆರಾಧ್ಯ, ಬಸ್‌ ಡಿಪೋ ಮ್ಯಾನೇಜರ್‌ವಿಪಿನ್‌ ಕೃಷ್ಣ, ರಾಜಸ್ವ ನಿರೀಕ್ಷಕಿ ಚಂದ್ರಕಲಾ,ಗ್ರಾಮ ಲೆಕ್ಕಾಧಿಕಾರಿ ಹರೀಶ್‌, ಸಬ್‌ ಇನ್ಸ್‌ಪೆಕ್ಟರ್‌ನವೀನ್‌, ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next