Inspection: ಬೆನ್ನು ನೋವು ಮರುಕಳಿಸಿದರೇ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ?
ಆರತಿ ಉಕ್ಕಡ ಮಾರಮ್ಮನ ದರ್ಶನ ಪಡೆದ ನಟ
Team Udayavani, Jan 16, 2025, 7:25 AM IST
ಮೈಸೂರು: ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ನಗರದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡರಲ್ಲದೇ, ಶಸ್ತ್ರಚಿಕಿತ್ಸೆಯ ಪೂರ್ವಭಾವಿ ತಪಾಸಣೆಗೆ ಒಳಗಾದರು.
ಫಿಸಿಯೋಥೆರಪಿಯಲ್ಲಿ ದರ್ಶನ್ ಬೆನ್ನು ನೋವು ಸ್ವಲ್ಪ ಗುಣವಾಗಿದ್ದು, 20 ದಿನದ ಹಿಂದೆ ಇದ್ದ ನೋವಿಗೂ ಇಂದಿನ ನೋವಿಗೂ ಬಹಳ ವ್ಯತ್ಯಾಸ ಕಂಡು ಬಂದಿದ್ದು, ಫಿಸಿಯೋಥೆರಪಿಯನ್ನು ಮುಂದುವರಿಸುವಂತೆ ವೈದ್ಯರು ಸೂಚನೆ ನೀಡಿದ್ದಾರಲ್ಲದೇ, ಬೆನ್ನು ನೋವಿಗೆ ಚುಚ್ಚುಮದ್ದು ನೀಡಿದ್ದಾರೆ. ಈಗ ನೀಡುವ ಚುಚ್ಚುಮದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ನೋವು ಮತ್ತೆ ಮರುಕಳಿಸಿದರೇ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಲಿದ್ದಾರೆ ಎನ್ನಲಾಗಿದೆ.
ಎಲ್-5, ಎಸ್-1 ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ ಈಗ ಕೊಟ್ಟಿರುವ ಚುಚ್ಚುಮದ್ದಿನಿಂದ ನರ ಮಂಡಲದ ಬ್ಲಾಕ್ ಸರಿಯಾಗದೇ ಇದ್ದರೆ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಇದಕ್ಕೂ ಮೊದಲು ಅವರ ಕುಟುಂಬದ ಎಲ್ಲ ಸದಸ್ಯರನ್ನೂ ಕರೆಯಿಸಿ, ಕೌನ್ಸೆಲಿಂಗ್ ಮಾಡಲಾಗುತ್ತದೆ ಎಂದು ಡಾ.ಅಜಯ್ ಹೆಗ್ಡೆ ತಿಳಿಸಿದ್ದಾರೆ. ಒಂದು ವಾರದ ನಂತರ ಕುಟುಂಬದ ಸಮೇತ ಆಸ್ಪತ್ರೆಗೆ ಬರುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ ಎನ್ನಲಾಗಿದೆ. ದರ್ಶನ್ ಜತೆ ನಟ ಧನ್ವೀರ್ ಮತ್ತಿತರರಿದ್ದರು.
ಆರತಿ ಉಕ್ಕಡ ಮಾರಮ್ಮನ ದರ್ಶನ ಪಡೆದ ನಟ
ಶ್ರೀರಂಗಪಟ್ಟಣ(ಮಂಡ್ಯ): ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್, ಮೈಸೂರು-ತಿ.ನರಸೀಪುರ ಹೆದ್ದಾರಿ ಬಳಿಯ ತಮ್ಮ ತೋಟದಲ್ಲಿ ಮಂಗಳವಾರ ಸಂಕ್ರಾಂತಿ ಹಬ್ಬ ಆಚರಿಸಿ, ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದರು. ಇದರ ಬೆನ್ನಲ್ಲೇ, ತಾಲೂಕಿನ ಶ್ರೀ ಕ್ಷೇತ್ರ ಆರತಿ ಉಕ್ಕಡ ಮಾರಮ್ಮನ ದೇವಾಲಯಕ್ಕೆ ನಟ ದರ್ಶನ್ ಅವರು ಪುತ್ರ ವಿನೀಶ್, ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಭೇಟಿ ನೀಡಿ ಆಹಲ್ಯ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇಗುಲಕ್ಕೆ ಆಗಮಿಸಿದ ದರ್ಶನ್ ಅವರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ವಾಗತಿಸಿದರು. ನಂತರ ದೇವಾಲಯದಲ್ಲಿ ದೇವಿಗೆ ವಿಶೇಷ ಹೂವಿನ ಹಾರ , ಹಣ್ಣು ನೀಡಿದ ದರ್ಶನ್ ಹಾಗೂ ಕುಟುಂಬ ಸದಸ್ಯರು ಕೆಲಹೊತ್ತು ದೇವಿ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಭದ್ರಾ ನದಿ ಸೇತುವೆ ಬಳಿ ಚಿರತೆ ಮೃತದೇಹ ಪತ್ತೆ; ಕೊಂದು ಬಿಸಾಕಿರುವ ಶಂಕೆ
BBK11: ಬಿಗ್ ಬಾಸ್ ಗೆದ್ದ ಸಂಭ್ರಮದಲ್ಲಿದ್ದ ಹನುಮಂತು ಮನೆಯಲ್ಲಿ ಸೂತಕ
Mysore: ಮುಡಾ ತನಿಖೆ ತಪ್ಪಿಸಲು ಸಿದ್ದರಾಮಯ್ಯ ಪ್ರಯತ್ನ: ಜೋಶಿ
Shirol Roti Fair: ಕೋಮುಸೌಹಾರ್ದತೆ ಗಟ್ಟಿಗೊಳಿಸಿದ ಶಿರೋಳ ರೊಟ್ಟಿ ಜಾತ್ರೆ
Chikkamagaluru: ಕಾಫಿ ಪಲ್ಪರ್ ನೀರಿನಿಂದ ಆನೆಬಿದ್ದ ಹಳ್ಳದ ನೀರು ಕಲುಶಿತ