Advertisement

ಹೆದ್ದಾರಿ ದುರಸ್ತಿಗೆ ಒತ್ತಾಯ

01:23 PM Feb 25, 2020 | Suhan S |

ಹಿರಿಯೂರು: ಹಿರಿಯೂರಿನಿಂದ ಹುಲಗಲಕುಂಟೆ ವರೆಗಿನ ಬೀದರ್‌-ಶ್ರೀರಂಗಪಟ್ಟಣ ಹೆದ್ದಾರಿಯನ್ನು ಕೂಡಲೇ ದುರಸ್ತಿ ಮಾಡುವಂತೆ ಒತ್ತಾಯಿಸಿ ತಾಲೂಕಿನ ಹುಲಗುಕುಂಟೆ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಒಂದು ಗಂಟೆಗೂ ಹೆಚ್ಚು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ಆರ್‌. ನಾಗೇಂದ್ರ ನಾಯ್ಕ ಮಾತನಾಡಿ, ಹುಲಗಲಕುಂಟೆ ಗ್ರಾಮದಲ್ಲಿ ಬೀದರ್‌- ಶ್ರೀರಂಗಪಟ್ಟಣ ಹೆದ್ದಾರಿ ಹಾದು ಹೋಗಿದೆ. ಮೈಸೂರು, ಹಾಸನ ತಿಪಟೂರು, ಮಂಡ್ಯ, ಮಂಗಳೂರು ಮುಂತಾದ ಸ್ಥಳಗಳಿಗೆ ಹಾದು ಹೋಗುತ್ತಿದ್ದು, ಪ್ರತಿ ನಿತ್ಯ ವಾಹನಗಳು ಹಗಲು ರಾತ್ರಿ ಓಡಾಡುತ್ತವೆ. ಹಿರಿಯೂರು ನಗರ ಸೇರಿದಂತೆ 20 ಕಿಮೀ ವ್ಯಾಪ್ತಿಯವರೆಗೆ ರಸ್ತೆ ಅಗಲಿಕರಣವಾಗಬೇಕು. ಅತಿ ತುರ್ತಾಗಿ ರಸ್ತೆಯನ್ನು ಹಿರಿಯೂರಿನಿಂದ ಸೀಗೆಹಟ್ಟೆವರೆಗೆ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿವೆ. ಗ್ರಾಮೀಣ ವಿದ್ಯಾರ್ಥಿಗಳು ನಗರಕ್ಕೆ ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಗಮನಹರಿಸಿ ತೊಂದರೆಯನ್ನು ತಪ್ಪಿಸಬೇಕು. ಈಗಾಗಲೇ ಹಿರಿಯೂರಿನಿಂದ ದೊಡ್ಡಬ್ಯಾಲದ ಕೆರೆವರೆಗೆ ರಸ್ತೆ ನಿರ್ಮಾಣಕ್ಕೆ 180 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಪ್ರಾಧಿಕಾರದವರು ಕಳುಹಿಸಿದ್ದಾರೆ. ಈ ಕೆಲಸವನ್ನು ಶೀಘ್ರ ಆರಂಭ ಮಾಡಬೇಕೆಂದು ತಿಳಿಸಿದರು. ಗ್ರೇಡ್‌-2 ತಹಶೀಲ್ದಾರ್‌ ಚಂದ್ರಕುಮಾರ್‌, ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ ನಾಗೇಂದ್ರ, ಎಜೆಇ ನಾಗರಾಜ್‌, ನಾರಾಯಣ, ಗ್ರಾಮಾಂತರ ಠಾಣೆ ಪಿಎಸ್‌ಐ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ರೈತ ಸಂಘದ ಮುಖಂಡರಾದ ಲಕ್ಷ್ಮೀಕಾಂತ್‌, ಜಿ.ಡಿ. ಶ್ರೀನಿವಾಸ್‌, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಶಿವಕುಮಾರ್‌, ದಸ್ತಗಿರಿ, ತಿಮ್ಮರಾಜು, ವೆಂಕಟೇಶ್‌, ಕಲ್ಪನಾ, ಶಶಿಕಲಾ, ಕರುಣಕುಮಾರ್‌ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next