Advertisement

ಮೀಸಲು ಹುದ್ದೆ ಭರ್ತಿಗೆ ಒತ್ತಾಯ

10:11 AM Dec 04, 2019 | Suhan S |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗಾಗಿಯೇ ಖಾಲಿ ಉಳಿದಿರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ದಿವ್ಯಾಂಗರು ಒತ್ತಾಯ ಮಾಡಿದರು.

Advertisement

ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗವಾರ ಸ್ನೇಹ ದೀಪ ಅಂಗವಿಕಲರ ಸಂಸ್ಥೆ ಹಾಗೂ ಡಿಲೇಟ್‌ ಟ್ರಸ್ಟ್‌ ವತಿ ಯಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ನೂರಾರು ದಿವ್ಯಾಂಗರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸ್ನೇಹ ದೀಪ ಅಂಗವಿಕಲರ ಸಂಸ್ಥೆಯ ಸಂಚಾಲಕ ಪೌಲ್‌ ಮುದ್ದ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಆ ಪೈಕಿ ವಿಕಲಚೇತನರಿಗಾಗಿಯೇ ನೂರಾರು ಹುದ್ದೆಗಳಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಿ, ಭರ್ತಿ ಮಾಡಬೇಕು. ಜತೆಗೆ ವಿಕಲಚೇತನರಿಗಿರುವ ಶೇ.3 ರಷ್ಟು ಮೀಸಲಾತಿಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಅಂಬಿಕಾ ಸಿಂಗ್‌ ಮಾತನಾಡಿ, ವಿಕಲಚೇತನರ ಬಗ್ಗೆ ಅನುಕಂಪದ ಜೊತೆಗೆ ಅವಕಾಶವನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ವಿಕಲಚೇತನರಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು. ಹಲವು ಮಂದಿ ವಿಕಲಚೇತನರು ಮಹತ್ತರ ಸಾಧನೆ ಮಾಡಿದ್ದು, ಅವತ ಜೀವನೋತ್ಸಾಹವು ಎಲ್ಲರಿಗೂ ಸ್ಪೂರ್ತಿಯಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next