Advertisement

ಪಂಚಮಸಾಲಿ (ದೀಕ್ಷ) 2ಎಗೆ ಸೇರ್ಪಡೆಗೆ ಒತ್ತಾಯ

01:19 PM Jul 18, 2022 | Team Udayavani |

ಆಳಂದ: ರಾಜ್ಯದಲ್ಲಿನ ಲಿಂಗಾಯಿತ ಪಂಚ ಮಸಾಲಿ (ದೀಕ್ಷ) ಸಮುದಾ ಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆ ಗೊಳಿ ಸಬೇಕು ಎಂದು ಪಂಚಮಸಾಲಿ ತಾಲೂಕು ಘಟಕ ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಒತ್ತಾಯಿಸಿತು.

Advertisement

ಕಲಬುರಗಿಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಸಮಾಜದ ಯುವ ಘಟಕದ ಅಧ್ಯಕ್ಷ ಆನಂದ ದೇಶಮುಖ, ಲಿಂಗರಾಜ ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.

ರಾಜ್ಯದಲ್ಲಿನ ಲಿಂಗಾಯಿತ ಪಂಚಮಸಾಲಿ ಸಮಾಜ ಅತ್ಯಧಿಕವಾಗಿ ಕೃಷಿಯನ್ನೇ ಅವಲಂಬಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಹವಾಮಾನ ವೈಪರೀತ್ಯಗಳಿಂದ, ಅತಿವೃಷ್ಟಿ, ಅನಾವೃಷ್ಟಿ ಹೊಡೆತದಿಂದ ಕೃಷಿ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ವಾಣಿಜ್ಯ ನಗರಗಳಿಗೆ ಕೃಷಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಸಮಾಜದ ಜನರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದು ಕಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಅವಸಾನದ ಅಂಚಿಗೆ ತಳ್ಳಿದೆ. ಸಮಾಜದ ಜನರನ್ನು ಸಾಮಾಜದ ಮುಖ್ಯವಾಹಿನಿಗೆ ತರಲು ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಿ ಅನುಕೂಲ ಒದಗಿಸಬೇಕು ಎಂದು ಒತ್ತಾಯಿಸಿದರು.

ಲಿಂಗಾಯಿತ ಪಂಚಮಸಾಲಿ ಯುವ ಅಧ್ಯಕ್ಷ ಆನಂದ ದೇಶಮುಖ, ಶಿವರಾಜ ಮರಡಿ, ಶರಣು ಪಾಟೀಲ, ಪುರಸಭೆ ಮಾಜಿ ಸದಸ್ಯ ಲಿಂಗರಾಜ ಪಾಟೀಲ, ಸಿದ್ಧು ಪಾಟೀಲ ಮಗಿ, ದಯಾನಂದ ಚೌಲ್‌, ಮಹೇಶ ಪಾಟೀಲ, ಶ್ರೀಶೈಲ ಪಾಟೀಲ, ಈರಣ್ಣಾ ನಿಂಗಶೆಟ್ಟಿ, ಕಾಡಸಿದ್ಧ ಭಾಸಗಿ, ಸೂರ್ಯಕಾಂತ ಚಿಂಚೋಳಿ, ಪ್ರಶಾಂತ ಪ್ರಖಂಡೆ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next