Advertisement

ಭ್ರಷ್ಟಾಚಾರ ತನಿಖೆಗೆ ಒತ್ತಾಯ

01:36 PM Aug 23, 2020 | Suhan S |

ಹಳಿಯಾಳ: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನೆ ನಡೆಯಿತು.

Advertisement

ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣದಲ್ಲಿ, ಅತಿವೃಷ್ಠಿ ನಿರ್ವಹಣೆಯಲ್ಲಿಯೂ ವಿಫಲವಾಗಿದ್ದು ಎರಡೂ ಸರ್ಕಾರಗಳು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ರೈತ ವಿರೋಧಿ  ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ವಾಪಸ್‌ ಪಡೆಯಬೇಕು, ರಾಜ್ಯದಲ್ಲಿ ಅತಿವೃಷ್ಠಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ವಿಫಲವಾಗಿರುವ ಸರ್ಕಾರದ ನಿಲುವನ್ನು ಪ್ರತಿಭಟಿಸಿದರು. ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಕ್ಲೃಕರ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ರವಿ ತೋರಣಗಟ್ಟಿ ನೇತೃತ್ವದಲ್ಲಿ ಜಿಪಂ ಸದಸ್ಯ ಕೃಷ್ಣಾ ಪಾಟೀಲ್‌, ಆರ್‌ ಎಸ್‌ಎಸ್‌ ಬ್ಯಾಂಕ್‌ ಅಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ, ಪ್ರಮುಖರಾದ ಸತ್ಯಜೀತ ಗಿರಿ ಮೊದಲಾದವರು ಇದ್ದರು.

……………………………………………………………………………………………………………………………………………………

ದೇವರಾಜ ಅರಸು ಜನ್ಮ ದಿನಾಚರಣೆ :  ಸಿದ್ದಾಪುರ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ದೇವರಾಜ ಅರಸು ಜನ್ಮ ದಿನವನ್ನು ಕೋವಿಡ್ 19 ಕಾರಣ ಸರಳವಾಗಿ ಆಚರಿಸಲಾಯಿತು. ತಾಪಂ ಯೋಜನಾಧಿಕಾರಿ ಎನ್‌.ಆರ್‌. ಹೆಗಡೆಕರ್‌, ಮೇಲ್ವಿಚಾರಕ ಕೆ.ಕೆ. ಗಣಪತಿ, ಐ.ಎ. ಜಂಗೂಭಾಯಿ, ಸುಧಾ ಮಡಿವಾಳ ಹಾಗೂ ನಿಲಯದ ಸಿಬ್ಬಂದಿ ಹಾಜರಿದ್ದರು. ದ್ವಿತೀಯ ಪಿಯುಸಿಯಲ್ಲಿ ಶೇ 95.17 ಅಂಕ ಗಳಿಸಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶಶಿ ಅಣ್ಣಪ ಗೌಡ ಶಶಿ ಗೌಡಳನ್ನು ಇಲಾಖೆಯ ಪರವಾಗಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next