Advertisement

ಬಸವನಹುಳು ಹಾನಿಗೆ ಪರಿಹಾರಕ್ಕೆ ಒತ್ತಾಯ

03:16 PM Jul 25, 2022 | Team Udayavani |

ಕಲಬುರಗಿ: ಬಸವನಹುಳು ಹಾವಳಿಗೆ ಜಿಲ್ಲೆಯ ಆಳಂದ, ಅಫಜಲಪುರ, ಚಿಂಚೋಳಿ ಸೇರಿದಂತೆ ಹಲವು ತಾಲೂಕುಗಳ ರೈತರು ನಲುಗಿದ್ದು, ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿದ್ದರಿಂದ ಎಕರೆಗೆ 15ಸಾವಿರ ರೂ. ಸೂಕ್ತ ಪರಿಹಾರ ನೀಡುವಂತೆ ಪ್ರಗತಿ ಪರ ರೈತ, ಕಾಂಗ್ರೆಸ್‌ ಮುಖಂಡ ಹಣಮಂತರಾವ ಭೂಸನೂರ ಆಗ್ರಹಿಸಿದ್ದಾರೆ.

Advertisement

ಆಳಂದ ತಾಲೂಕಿನ ಧುತ್ತರಗಾಂವ್‌, ಕಡಗಂಚಿ, ಕಿಣ್ಣಿ ಸುಲ್ತಾನ್‌, ಕೊಡಲ ಹಂಗರಗಾ ಸೇರಿದಂತೆ ಬಸವನಹುಳು ಬಾಧೆಯಿಂದ ಪೀಡಿತವಾಗಿರುವ ಗ್ರಾಮಗಳ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ, ಸೋಯಾಬೀನ್‌ ಸೇರಿದಂತೆ ಉದ್ದು, ಹೆಸರು ಪ್ರತಿ ಎಕರೆಗೆ ರೈತ ಕನಿಷ್ಟ 10 ರಿಂದ 12 ಸಾವಿರ ರೂ. ವೆಚ್ಚ ಮಾಡಿದ್ದಾನೆ. ಬಿತ್ತಿದ ಫಸಲು ಹೀಗೆ ಹಾಳಾದರೆ ರೈತರು ಸಾಲಸೋಲ ಮಾಡಿಕೊಂಡು ತೊಂದರೆಗೆ ಒಳಗಾಗೋದು ನಿಶ್ಚಿತ. ಹೀಗಾಗಿ ಈ ಹಂತದಲ್ಲಿ ಸರ್ಕಾರ ತಕ್ಷಣ ರೈತರಿಗೆ ನೆರವಿಗೆ ಬರಲಿ ಎಂದು ಒತ್ತಾಯಿಸಿದ್ದಾರೆ.

ಹಾನಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತಕ್ಷಣ ಕೃಷಿ ಸಚಿವರು ಬಿ.ಸಿ. ಪಾಟೀಲ, ಜಿಲ್ಲಾ ಸಚಿವ ಮುರುಗೇಶ ನಿರಾಣಿ ಹುಳು ಪೀಡಿತ ಹೊಲಗಳಿಗೆ ಭೇಟಿ ನೀಡಲಿ. ಜಿಲ್ಲಾಡಳಿತ, ಕೃಷಿ ಇಲಾಖೆಯೂ ಭೇಟಿ ನೀಡಿ ಸಮೀಕ್ಷೆ ಮಾಡಲಿ. ಒಟ್ಟಾರೆ ರೈತರಿಗೆ ಹಾನಿಯಾದ ಫಸಲಿಗೆ ಪರಿಹಾರ ದೊರಕಬೇಕೆಂದರು. ಪರಿಸ್ಥಿತಿ ಗಂಭೀರವಾಗಿದ್ದು ಯಾರೊಬ್ಬರೂ ರೈತರ ನೋವಿಗೆ ಸ್ಪಂದಿಸುತ್ತಿಲ್ಲವೆಂದು ಭೂಸನೂರ್‌ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next