Advertisement

ಕೀಟ ಬಾಧೆ- ಅಧ್ಯಯನ ಅಗತ್ಯ: ಸಚಿವ ರೈ

09:59 AM Dec 22, 2017 | Team Udayavani |

ಮಂಗಳೂರು: ರೈತರ ಬೆಳೆಗೆ ಕೀಟ ಬಾಧೆ, ರೋಗ ಮತ್ತಿತರ ಸಮಸ್ಯೆಗಳು ಎದು ರಾದಾಗ ಸಂಬಂಧಪಟ್ಟ ಇಲಾಖೆಗಳು ವಿಜ್ಞಾನಿ ಗಳ ಸಹಕಾರದಿಂದ ಅಧ್ಯಯನ ನಡೆಸಿ ಪರಿಹಾರೋ ಪಾಯ ಕಂಡುಕೊಳ್ಳಬೇಕು; ಸರಕಾರ ರೈತರ ಕಷ್ಟ ಸಂಕಷ್ಟಗಳಲ್ಲಿ ಸಹಭಾಗಿಯಾಗಿ ನೆರವು ಒದಗಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. 

Advertisement

ರಾಷ್ಟ್ರೀಯ ರೈತ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ.ಜಿ.ಪಂ. ತೋಟಗಾರಿಕಾ ಇಲಾಖೆ ಮತ್ತು ಐಸಿಎಆರ್‌-ಕೃಷಿ ವಿಜ್ಞಾನ ಕೇಂದ್ರದ  ಸಂಯುಕ್ತ ಆಶ್ರಯದಲ್ಲಿ  ಕೊಡಿಯಾಲ್‌ಬೈಲ್‌ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣ ದಲ್ಲಿ ಗುರುವಾರ “ಕಲ್ಪವೃಕ್ಷಕ್ಕೆ ಕೀಟ – ಕಾಟ’ ವಿಷಯದ ಕುರಿತು ನಡೆದ ರೈತ- ವಿಜ್ಞಾನಿ- ಅಧಿಕಾರಿ- ಮಾಧ್ಯಮಗಳ ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೀಟ ಬಾಧೆಯಿಂದ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಲಭ್ಯವಿಲ್ಲ. ಸರಕಾರ ಮಧ್ಯ ಪ್ರವೇಶಿಸಿ ರೈತರಿಗೆ ನೆರವಾಗುವ ಅಗತ್ಯ ಇದೆ ಎಂದರು.

ಸಹಕಾರಿ ವ್ಯವಸ್ಥೆಯ ಮೂಲಕ ನೀರಾ ತೆಂಗಿನ ಕಾಯಿಯ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಚಿಂತನೆ ಮಾಡಿದರೆ ತೆಂಗಿನ ಕೃಷಿ ಲಾಭದಾಯಕವಾಗ ಬಲ್ಲುದು. ಈ ದಿಶೆಯಲ್ಲಿ ತೆಂಗಿನ ನೀರಾ ತೆಗೆಯಲು ಅಬಕಾರಿ ಇಲಾಖೆ ಸೂಕ್ತ ರಿಯಾಯಿತಿ ನೀಡಿದೆ. ಸರಕಾರವು ಸಹಕಾರಿ ವ್ಯವಸ್ಥೆಯ ಮೂಲಕ ನೀರಾ ಮಾರಾಟ ಮಾಡಲು ಅನುಮತಿ ನೀಡುವ ಹಂತದಲ್ಲಿದೆ ಎಂದರು. 
ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ತೆಂಗು  ಸಂಸ್ಕರಣೆಗೆ ವ್ಯವಸ್ಥೆಯನ್ನು ನಾವು ಮಾಡುವ ಆವಶ್ಯಕತೆ ಇದೆ ಎಂದರು.

ಫಿಶರೀಸ್‌ ಕಾಲೇಜಿನ ವಿಸ್ತರಣಾ ನಿರ್ದೇಶಕ ಡಾ| ಎಸ್‌.ಎಂ. ಶಿವಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ| ಎಚ್‌.ಆರ್‌. ನಾಯ್ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಿಇಒ ಸತೀಶ್‌, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್‌. ಕೆಂಪೇ ಗೌಡ, ಬೆಂಗಳೂರಿನ ಎನ್‌ಬಿಎಐಆರ್‌ ಮುಖ್ಯ ವಿಜ್ಞಾನಿ ಡಾ| ಶೈಲೇಶ್‌, ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿ ಡಾ| ವಿನಾಯಕ ಹೆಗಡೆ, ಉಡುಪಿಯ ಜಂಟಿ ಕೃಷಿ ನಿರ್ದೇಶಕರಾದ ಭುವನೇಶ್ವರಿ, ಕದ್ರಿ ನವನೀತ್‌ ಶೆಟ್ಟಿ, ರಾಮಕೃಷ್ಣ ಅವರು ವೇದಿಕೆಯಲ್ಲಿದ್ದರು. ವಿಜಯಕರ್ನಾಟಕ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್‌ ಸ್ವಾಗತಿಸಿದರು. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಶಿವಕುಮಾರ್‌ ಮಗದ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next