Advertisement

ಜಿಲ್ಲೆಯಲ್ಲಿ ಬೇವಿನ ಎಲೆಗಳ ಭಕ್ಷಕ ಕೀಟ ಪತ್ತೆ

08:23 AM Jun 25, 2020 | Suhan S |

ವಿಜಯಪುರ: ಜಿಲ್ಲೆಯ ಭೀಮಾ ನದಿ ಪಾತ್ರ ಹಳ್ಳಿಗಳಲ್ಲಿ ಬೇವಿನ ಮರಗಳ ಎಲೆಗಳನ್ನು ತಿಂದು ಹಾಕುವ ವಿಚಿತ್ರ ಕೀಟಗಳು ಪತ್ತೆಯಾಗಿವೆ. ಇದರಿಂದ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ. ಲಚ್ಯಾಣ ಹಾಗೂ ಪಡನೂರು ಗ್ರಾಮಗಳ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಈ ಕೀಟಗಳು ಕಾಣಿಸಿಕೊಂಡಿದ್ದು, ವಿಷಕಾರಕ ಬೇವಿನ ಮರದ ಎಲೆಗಳನ್ನು ತಿಂದು ಹಾಕುತ್ತಿವೆ. ಇದರಿಂದ ಈ ಭಾಗದ ಜನರು ಆತಂಕಕ್ಕೆ ಈಡಾಗಿದ್ದಾರೆ. ಸದರಿ ಕೀಟಗಳು ಬೆಳೆದು ನಿಂತಿರುವ ಕಬ್ಬು ಹಾಗೂ ಇತರೆ ತೋಟಗಾರಿಕೆ ಬೆಳೆಗೆ ಹಾನಿ ಮಾಡುವ ಭೀತಿ ಎದುರಾಗಿದೆ.

Advertisement

ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬೇವಿನ ಎಲೆ ಭಕ್ಷಕ ಕೀಟಗಳ ಹಾವಳಿ ನಿಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next