Advertisement

ISRO: ಇಂದು ಇಸ್ರೋದಿಂದ ಇನ್‌ಸ್ಯಾಟ್‌-3ಡಿಎಸ್‌ ಉಡಾವಣೆ

09:16 PM Feb 16, 2024 | Team Udayavani |

ನವದೆಹಲಿ: ಭಾರತದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಶನಿವಾರ ಇನ್‌ಸ್ಯಾಟ್‌-3ಡಿಎಸ್‌ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆಗೊಳ್ಳಲಿದೆ. 51.7 ಮೀಟರ್‌ ಎತ್ತರವಿರುವ ಜಿಎಸ್‌ಎಲ್‌ವಿ ರಾಕೆಟ್‌ ಉಪಗ್ರಹವನ್ನು ಹೊತ್ತೂಯ್ಯಲಿದೆ. ಉಪಗ್ರಹ ಒಟ್ಟು ತೂಕ 2,274 ಕೆ.ಜಿ. ಇದರ ನಿರ್ಮಾಣಕ್ಕೆ 480 ಕೋಟಿ ರೂ. ವೆಚ್ಚವಾಗಿದೆ. ಕೇಂದ್ರ ಭೂವಿಜ್ಞಾನ ಇಲಾಖೆ ಸಂಪೂರ್ಣ ವೆಚ್ಚವನ್ನು ಭರಿಸಿದೆ.

Advertisement

ಉಪಯೋಗಗಳೇನು?:

ಭಾರತದ ಹವಾಮಾನ, ವಾತಾವರಣಕ್ಕೆ ಸಂಬಂಧಿಸಿದಂತೆ ಮುನ್ಸೂಚನೆಗಳನ್ನು ನೀಡುವುದು ಇನ್‌ಸ್ಯಾಟ್‌-3ಡಿಎಸ್‌ ಉಪಗ್ರಹದ ಮುಖ್ಯ ಕೆಲಸ. ಈ ಉಪಗ್ರಹಗಳು ಇದುವರೆಗೆ ಭಾರತದ ಪಾಲಿಗೆ ನಿರ್ಣಾಯಕ ಶಕ್ತಿಗಳಾಗಿ ಕೆಲಸ ಮಾಡಿವೆ. ಭೂಮಿಯ ಮೇಲ್ಪದರ, ಸಮುದ್ರಭಾಗಗಳ ಮೇಲೆ ನಿಗಾ, ಮಳೆ, ಪ್ರವಾಹಗಳು, ಭೂಕಂಪನಗಳ ಕುರಿತು ಉಪಗ್ರಹ ಮುನ್ಸೂಚನೆ ನೀಡಲಿದೆ. ಈ ಉಪಗ್ರಹ ಸುಧಾರಿತ ಮೂರನೇ ಆವೃತ್ತಿಯಾಗಲಿದೆ. ಪೂರ್ಣವಾಗಿ ಹವಾಮಾನ ಸಂಬಂಧಿ ಕೆಲಸಗಳಿಗೇ ಸಮರ್ಪಿತಗೊಂಡಿದೆ.

2,274 ಕೆಜಿ- ಉಪಗ್ರಹದ ತೂಕ

480 ಕೋಟಿ ರೂ.- ನಿರ್ಮಾಣ ವೆಚ್ಚ

Advertisement

51.9 ಮೀಟರ್‌– ಜಿಎಸ್‌ಎಲ್‌ವಿ ರಾಕೆಟ್‌ನ ಎತ್ತರ

Advertisement

Udayavani is now on Telegram. Click here to join our channel and stay updated with the latest news.

Next