Advertisement

ಸಾಂವಿಧಾನಿಕ ಸಿಂಧುತ್ವ ಪ್ರಕರಣಗಳ ವಿಚಾರಣೆ: ಸಿಜೆಗೆ ವಕೀಲರ ಸಂಘ ಪತ್ರ

10:01 AM Nov 23, 2021 | Team Udayavani |

ಬೆಂಗಳೂರು: ಕಾನೂನು ಮತ್ತು ನೀತಿ-ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳನ್ನು ವಿಭಾಗೀಯ ನ್ಯಾಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸು ನಿರ್ದೇಶಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ಕೈಬಿಡಬೇಕು ಎಂದು ಬೆಂಗಳೂರು ವಕೀಲರ ಸಂಘ ಮನವಿ ಮಾಡಿದೆ.

Advertisement

ಈ ವಿಚಾರವಾಗಿ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್‌ ಪತ್ರ ಬರೆದಿದ್ದಾರೆ ಈವರೆಗೆ ಸಾಂವಿಧಾನಿಕ ವಿಚಾರಗಳ ವಿಚಾರಣೆಗೆ ಏಕಸದಸ್ಯ ನ್ಯಾಯಪೀಠದ ಮುಂದೆಯೂ ಅವಕಾಶವಿತ್ತು.

ಇದನ್ನೂ ಓದಿ:- ರಾಶಿ ಫಲ : ಹಠಮಾರಿತನ ಸಲ್ಲದು. ಸುಮ್ಮನೆ ನಿಷ್ಠುರಕ್ಕೆ ಕಾರಣವಾಗದಿರಿ.

ಆದರೆ ಇದೀಗ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದಾಗಲೇ ಆದೇಶ ಹೊರಡಿಸಿ ಅದನ್ನು ವಿಭಾಗೀಯ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ. ಅಲ್ಲದೇ ಇನ್ನು ಮುಂದೆ ಸಾಂವಿಧಾನಿಕ ವಿಚಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಯನ್ನೂ ವಿಭಾಗೀಯ ನ್ಯಾಯಪೀಠದ ಮುಂದೆ ನಿಗದಿಪಡಿಸಲು ಹೈಕೋರ್ಟ್‌ ಆದೇಶಿಸಿದೆ.

ಹೈಕೋರ್ಟ್‌ನ ಈ ನಿರ್ಧಾರದ ಸಿಂಧುತ್ವ, ಅದರ ಸಮಯ ಹಾಗೂ ಅದನ್ನು ಹೊರಡಿಸಿದ ರೀತಿ ವಕೀಲರ ನಡುವೆ ಚರ್ಚೆಗೆ ಕಾರಣವಾಗಿದೆ. ಅಧಿಸೂಚನೆ ಹೊರಡಿಸಿದ ನಿರ್ಧಾರ ತಪ್ಪಾಗಿದ್ದು ನ್ಯಾಯದಾನ ಅಥವಾ ವಕೀಲ ಸಮೂಹದ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂದು ಸಂಘ ಪತ್ರದಲ್ಲಿ ತಿಳಿಸಿದೆ.

Advertisement

ದೇಶದ ಕೆಲವು ಹಿರಿಯ ಕಾನೂನು ತಜ್ಞರು ವಾದ ಮಂಡಿಸುತ್ತಿರುವ ಕರ್ನಾಟಕ ಪೊಲೀಸ್‌ ಕಾಯ್ದೆಯ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅರ್ಧ ನಡೆದ ನಂತರ ಇಂತಹ ಪ್ರಕರಣಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿ ಮಾಡುತ್ತಿ ರು ವುದು ವಕೀಲ ಸಮುದಾಯಕ್ಕೆ ಸರಿ ಕಾಣುತ್ತಿಲ್ಲ. ಶಾಸನಗಳು ಮತ್ತು ನಿಯಮಗಳ ಅಡಿಯಲ್ಲಿ ಏಕಸದಸ್ಯ ನ್ಯಾಯಪೀಠಕ್ಕೆ 226ನೇ ವಿಧಿಯಡಿ ನೀಡಲಾದ ಮೂಲ ರಿಟ್‌ ಅಧಿಕಾರವನ್ನು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೂಲಕ ತೆಗೆದುಹಾಕಬಹುದೇ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next