Advertisement

ಮತ ಜಾಗೃತಿ ಮೂಡಿಸಲು ವಿನೂತನ ಪ್ರಯೋಗ: ಮೆಹಂದಿ ಆಂದೋಲನ, ಸ್ಪರ್ಧಾ ಕಾರ್ಯಕ್ರಮ

05:21 PM Apr 20, 2023 | Team Udayavani |

ಹೊಳಲ್ಕೆರೆ:  ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಹೊಳಲ್ಕೆರೆ ಪುರಸಭೆಯು ಇಂದು ಹೀಗೊಂದು ವಿನೂತನ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ಮಹಿಳೆಯರು, ಮಹಿಳಾ ಸ್ವಯಂ ಸೇವಾ ಸಂಘದ ಪ್ರತಿನಿಧಿಗಳು, ಪುರಸಭೆಯ ಮಹಿಳಾ ನೌಕರರುಗಳು ಮತದಾನದ ಕುರಿತು ಜಾಗೃತಿ ಮೂಡಿಸುವ ಮೆಹಂದಿ ಬರಹಗಳನ್ನು ನಾಗರಿಕರ ಕೈಮೇಲೆ ಬರೆದರು. ಅದರಲ್ಲೂ ವಿಶೇಷವಾಗಿ ಮಹಿಳಾ ಮತದಾರರು, ಪುಟ್ಟ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಮತದಾನ ಜಾಗೃತಿ ಮೂಡಿಸುವ ಮೆಹಂದಿ ಚಿತ್ರಗಳನ್ನು ತಮ್ಮ ಕೈಮೇಲೆ ಬರೆಸಿಕೊಂಡರು. ಉತ್ತಮ ಮೆಹಂದಿ ಚಿತ್ರಗಳನ್ನು ಬರೆದವರಿಗೆ ಈ ಸಂದರ್ಭದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಮೆಚ್ಚುಗೆಯ ಸ್ಥಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

Advertisement

ಹೊಳಲ್ಕೆರೆ ಪಟ್ಟಣದ ನವೋದಯ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಈ ಮೆಹಂದಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಮಹಿಳಾ ಮತದಾರರು ಮತದಾನ ಮಾಡುವ ಬಗ್ಗೆ ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ಮತಚಲಾಯಿಸುವಲ್ಲಿ ನಿರ್ಲಕ್ಷತನ ತೋರದೆ ತಮಗೆ ಸಿಕ್ಕ ಮತ ಚಲಾಯಿಸುವ ಹಕ್ಕನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಮಹಿಳಾ ಮತದಾರರಲ್ಲಿ ವಿನಂತಿಸಿಕೊಂಡರು.

ಇದನ್ನೂ ಓದಿ: Udupi assembly constituency; ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಶಾಸಕರೇ ಬೆಂಗಾವಲು

ಹೊಳಲ್ಕೆರೆ ಪುರಸಭೆಯ ಸಿಬ್ಬಂದಿಗಳಾದ ನೀಲಕಂಠಾಚಾರ್, ನೌಷಾದ್, ನಾಗಭೂಷಣ್, ಕಿಶೋರ್, ಪ್ರಶಾಂತ್, ದೇವರಾಜ್, ಶರತ್, ಹಾಲೇಶ್, ಪುನೀತ್, ಗಣೇಶ್, ಹನುಮಂತಪ್ಪ, ಸಾಕಮ್ಮ, ಯಶೋದಮ್ಮ, ದೀಪಾ, ಕಮಲಮ್ಮ, ಭಾರತಮ್ಮ, ರಮ್ಯ, ಗೀತಾ, ಜ್ಯೋತಿ, ಉಮಾ, ಶಿಕ್ಷಕರಾದ ನಾಗರಾಜ್ ಹಾಗೂ ಎಲ್ಲಾ ಮಹಿಳಾ ಪೌರ ಕಾರ್ಮಿಕರು, ಮಹಿಳಾ ಸ್ವ ಸಹಾಯ ಗುಂಪುಗಳ ಮಹಿಳಾ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next