Advertisement

ಟೊಯೊಟಾ ಇನ್ನೋವಾ ಹೈಕ್ರಾಸ್‌ ಭಾರತದ ಮಾರುಕಟ್ಟೆಗೆ : ಜನವರಿಯಿಂದಲೇ ಡೆಲಿವರಿ ಶುರು

07:26 PM Nov 25, 2022 | Team Udayavani |

ಟೊಯೊಟಾ ಕಂಪನಿ ತನ್ನ ಹೊಸ ಇನ್ನೋವಾ ಹೈಕ್ರಾಸ್‌ ಎಂಪಿವಿ ಕಾರನ್ನು ಕೊನೆಗೂ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2023ರ ಜನವರಿಯಿಂದಲೇ ಕಾರಿನ ಡೆಲಿವರಿ ಆರಂಭವಾಗಲಿದೆ.
ಇಂಡೋನೇಷ್ಯಾದಲ್ಲಿ ಈ ಕಾರು ಇನ್ನೋವಾ ಝೆನಿಕ್ಸ್‌ ಹೆಸರಲ್ಲಿ ಅನಾವರಣಗೊಂಡಿತ್ತು. ಇದು ಮೊನೊಕಾಕ್‌ ನಿರ್ಮಾಣವನ್ನು ಆಧರಿಸಿದ ಮೊದಲ ಇನ್ನೋವಾ ಎಂಬ ಖ್ಯಾತಿಯನ್ನೂ ಗಳಿಸಿದೆ. ಕಂಪನಿಯು ಹೈಕ್ರಾಸ್‌ಗೆ ಎಸ್‌ಯುವಿ ಮಾದರಿಯ ಲುಕ್‌ ಬರುವಂತೆ ನೋಡಿಕೊಂಡಿದೆ.

Advertisement

ಹಲವು ವಿಶಿಷ್ಟ ಫೀಚರ್‌ಗಳನ್ನೂ ಅಳವಡಿಸಲಾಗಿದೆ. ಒಟ್ಟು 5 ಆವೃತ್ತಿಗಳಲ್ಲಿ ಹೈಕ್ರಾಸ್‌ ಲಭ್ಯವಾಗಲಿದೆ. ಕಾರಿನ ದರವನ್ನು ಇನ್ನೂ ಘೋಷಣೆ ಮಾಡಿಲ್ಲ. ಆದರೆ, 22ರಿಂದ 28 ಲಕ್ಷ ರೂ. ಇರಬಹುದೆಂದು ಅಂದಾಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next