ಕೊರಟಗೆರೆ: ಸರ್ಕಾರದಿಂದ ಬರುವ ಹಾಲಿನ ಪ್ರೋತ್ಸಾಹ ಧನ ಇಲ್ಲಿಯವರೆಗೂ ನೀಡಿಲ್ಲ. ಲೆಕ್ಕಪತ್ರ ಕೇಳಿದರೆ ದೌರ್ಜನ್ಯ ಮಾಡುತ್ತಿರುವ ಕಾರ್ಯದರ್ಶಿ ಲಕ್ಷ್ಮೀಪತಿ ವಿರುದ್ಧ ಗ್ರಾಮಸ್ಥರು ಚಟ್ಟೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಹೊಳವನಹಳ್ಳಿ ಬೊಮ್ಮಳದೇವಿಪುರ ಗ್ರಾಪಂ ವ್ಯಾಪ್ತಿಯ ಚಟ್ಟೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ 1987ರಲ್ಲಿ ಆರಂಭ ವಾಗಿದ್ದು, ಇಲ್ಲಿಯವರೆಗೊ ಅಭಿವೃದ್ಧಿಯಾಗಿಲ್ಲ. ಇಲ್ಲಿಯವರೆಗೂ ರೈತನಿಗೂ ಸರ್ಕಾರದಿಂದ ಬರುವ ಸೌಲಭ್ಯ ನೀಡಿಲ್ಲ. ಸ್ವಂತ ನಿವೇಶನದಲ್ಲಿರುವ ಕಟ್ಟಡ ಪೂರ್ಣಗೊಳಿಸದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
7 ತಿಂಗಳಿನಿಂದ ಡೇರಿಗೆ ಹಾಲು ಹಾಕುತ್ತಿದ್ದೇನೆ. ಸದಸ್ಯತ್ವ ಪಡೆಯವುದಾಗಿ ಹೇಳಿದ್ದೆ. ನಿಮ್ಮ ತಂದೆ ಸದಸ್ಯತ್ವ ಹೊಂದಿದ್ದಾರೆ ಎಂದು ಕಾರ್ಯದರ್ಶಿ ತಿರಸ್ಕರಿಸುತ್ತಿದ್ದಾರೆ. ಬೇರೆ ಮನೆಯಲ್ಲಿ ವಾಸವಿರುವುದಾಗಿ ತಿಳಿಸಿದರೂ ಸದಸ್ಯತ್ವ ಕೊಡುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ದರೂ ಪ್ರಯೋಜನವಾಗಿಲ್ಲ. ಸರ್ಕಾರಿ ಸೌಲಭ್ಯವೂ ಸಿಕ್ಕಿಲ್ಲ. ಅಧ್ಯಕ್ಷರು ಸದಸ್ಯತ್ವ ನೀಡಲು ಸೂಚಿಸಿದರೂ ಬೆಲೆ ಕೊಡುತ್ತಿಲ್ಲ ಎಂದು ಗ್ರಾಪಂ ಸದಸ್ಯ ಶಿವಲಿಂಗಯ್ಯ ಆರೋಪಿಸಿದರು.
ಸಂಘದ ಸಭೆಯಲ್ಲಿ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಿ, ಕಾರ್ಯಕ್ರಮ ಮುಗಿದ ನಂತರ ಮನೆಗೆ ಹೋಗಿದ್ದು, ಮತ್ತೆ ಕರೆಯಿಸಿ ಸಭೆ ವಿಡಿಯೋ ಮಾಡಿದ್ದಿ ಎಂದು ಹಲ್ಲೆ ನಡೆಸಿ ಮೊಬೈಲ್ ಕಿತ್ತು ಇಲ್ಲಿಯವರೆಗೂ ಕೊಟ್ಟಿಲ್ಲ ಎಂದು ಕಾರ್ಯದರ್ಶಿ ವಿರುದ್ಧ ಗ್ರಾಮಸ್ಥ ಬೀರಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟಾಚಲಪ್ಪ, ಮುಖಂಡರಾದ ದೊಡ್ಡಯ್ಯ, ನಾಗರಾಜು, ವಿಜಿ ಕುಮಾರ್, ಹನುಮಂತರಾಯಪ್ಪ, ದಾಸಪ್ಪ, ನಾಗೇಶ್, ಶ್ರೀನಿವಾಸ್, ಚಿಕ್ಕಣ್ಣ, ಸನಂದ ಗಣೇಶ್, ಲಕ್ಷಿ ್ಮೕಯ್ಯ, ದೇವರಾಜು, ಆನಂದ, ಈಶ್ವರ್, ಪಾಂಡುರಂಗ, ಶಿವಗೌಡ, ನರಸೀಯಪ್ಪ, ರವಿಕುಮಾರ್, ನರಸಿಂಹರಾಜು, ನವೀ, ಕಾಂತರೆಡ್ಡಿ, ಹಾಗೂ ರಫೀಕ್, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.