Advertisement

ಮೂಲಸೌಕರ್ಯ ಅಭಿವೃದ್ಧಿಗೆ ಆಗ್ರಹ

01:45 PM Jan 15, 2021 | Team Udayavani |

ಭಟ್ಕಳ: ಮುರ್ಡೇಶ್ವರ ನಾಕೆಯಿಂದ ದೇವಸ್ಥಾನದವರೆಗಿನ ರಸ್ತೆ ಮಾಡಲಾಗುತ್ತಿದ್ದು ಅದು ಟೆಂಡರ್‌ನಲ್ಲಿ ನಮೂದಿಸಿರುವ ನಮೂನೆಯಲ್ಲಿ ಮಾಡಬೇಕು ಎಂದು ಮುರ್ಡೇಶ್ವರ ನಾಗರಿಕ ಸೇವಾ ಸಮಿತಿ ಆಗ್ರಹಿಸಿದೆ.

Advertisement

ರಸ್ತೆಗೆ ದಾರಿದೀಪಗಳನ್ನು ಹಾಗೂ ಎರಡೂ ಕಡೆಗಳಲ್ಲಿ ಚರಂಡಿ ಮಾಡಬೇಕು. ವಾಹನಗಳಿಗೆ ಅನುಕೂಲವಾಗುವಂತೆ ಸಾಧ್ಯವಾದ ಕಡೆಯಲ್ಲಿ ರಸ್ತೆ ಡಿವೈಡರ್‌ ಅಳವಡಿಸಬೇಕು. ನಾಕೆಯಿಂದ ಮುರ್ಡೇಶ್ವರ ದೇವಸ್ಥಾನದವರೆಗಿನ ರಸ್ತೆ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಆಗುತ್ತಿದ್ದು ಇದರಿಂದ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದು ಅದನ್ನು ತ್ವರಿತಗತಿಯಿಂದ ಮಾಡಿ ಮುಗಿಸುವಂತಾಗಬೇಕು. ಪೇಟೆ ಮಧ್ಯದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸಂಚಾರಿ ನಿಯಮಗಳನ್ನು ಕ್ರಿಯಾರೂಪಕ್ಕೆ ತರುವ ವ್ಯವಸ್ಥೆ ಆಗಬೇಕು.

ವಾಹನ ಸವಾರರಿಗೆ, ಪ್ರವಾಸಿಗರಿಗೆ ವಾಹನಗಳನ್ನು ನಿಲ್ಲಿಸಲು ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಆಗಬೇಕು. ಪಾರ್ಕಿಂಗ್‌ ಜಾಗದ ಕುರಿತು ಮುರ್ಡೇಶ್ವರ ದ ಕಸ್ಟಮ್‌ ಇಲಾಖೆ, ಬಂದರು ಇಲಾಖೆ, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಜಾಗಾ ಈಗಾಗಲೇ ಅತಿಕ್ರಮಣವಾಗಿದ್ದು ಅವುಗಳನ್ನು ಗುರುತಿಸಿ ವಶಕ್ಕೆ ಪಡೆದು ಅಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದಲ್ಲಿ ಅನುಕೂಲವಾಗುವುದು.

ಮುರ್ಡೇಶ್ವರ ಮಧ್ಯಭಾಗದಲ್ಲಿ ಜನಸಂಚಾರಕ್ಕೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಲು ಸಂಬಂಧಿತ ಇಲಾಖೆಗಳಿಗೆ ಹಾಗೂ ಪೊಲೀಸ್‌ ಇಲಾಖೆಗಳಿಗೆ ಮಾರ್ಗದರ್ಶನ ನೀಡಬೇಕು. ಬಸ್ತಿ-ಮುಡೇìಶ್ವರ ಕೂಡುವ ರಸ್ತೆಯಲ್ಲಿ ವಾಹನಗ ಓಡಾಟಕ್ಕೆ ತೀವ್ರ ತೊಂದರೆ ಇದ್ದು ಅದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಸುಗಮ ಸಂಚಾರಕ್ಕೆ ಹಾಗೂ ಬಸ್ತಿ ಮೂಲಕ ಬರುವ ವಾಹನಗಳಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಮೂಲಭೂತ ಸೌಕರ್ಯಗಳ ಕೊರತೆ ವಿಪರೀತವಾಗಿದ್ದು ಪ್ರವಾಸಿಗರು ಮುರ್ಡೇಶ್ವರ ಕ್ಕೆ ಬಂದರೆ ಒಂದೂ ಕೂಡಾ ಶೌಚಾಲಯ ಇಲ್ಲವಾದ್ದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ:ಪೊಲೀಸ್‌ ಪಡೆಯಿಂದ ಹೆಲ್ಮೆಟ್‌ ಜಾಗೃತಿ

Advertisement

ಅಲ್ಲದೇ ಕುಡಿಯುವ ನೀರಿಗಾಗಿ ತೊಂದರೆ ಪಡುವ ಪರಿಸ್ಥಿತಿ ಇದ್ದು ಗ್ರಾಪಂ ಮೂಲಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅವುಗಳ ನಿರ್ವಹಣೆಗೆ ಕೂಡಾ ಸರಿಯಾದ ವ್ಯವಸ್ಥೆ ಮಾಡಬೇಕು. ಸ್ವತ್ಛತಾ ವ್ಯವಸ್ಥೆಗೆ ನಿಯಮಾವಳಿ ರೂಪಿಸಿ ಕ್ರಮಕೈಗೊಳ್ಳಬೇಕು. ವಾಹನಗಳನ್ನು ರಸ್ತೆ ಪಕ್ಕದಲ್ಲಿಯೇ ಪಾರ್ಕಿಂಗ್‌ ಮಾಡುವುದರಿಂದ ಬೇರೆ ವಾಹನ ಸಂಚಾರಕ್ಕೆ ಹಾಗೂ ನಾಗರಿಕರಿಗೆ ತೊಂದರೆಯಾಗುತ್ತಿದ್ದು ಅವುಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಲಾಗದೆ. ಮುರ್ಡೇಶ್ವರ ಬೀಚ್‌ ಭಾಗದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತ್ವರಿತವಾಗಿ ನಿಯಂತ್ರಿಸಬೇಕು ಹಾಗೂ ಅಲ್ಲಿ ವ್ಯವಸ್ಥಿತವಾಗಿ ವ್ಯಾಪಾರ ವಹಿವಾಟಿಗೆ ಸರಕಾರದಿಂದಲೇ ಅಂಗಡಿಗಳನ್ನು ನಿರ್ಮಿಸಿ ಟೆಂಡರ್‌ ಮೂಲಕ ನೀಡಿದಲ್ಲಿ ಸರಕಾರಕ್ಕೂ ಆದಾಯ ಬರುವುದು. ಅಲ್ಲದೇ ಮೀನುಗಾರರಿಗೆ ಸರಿಯಾಗ ವ್ಯವಸ್ಥೆ ಮಾಡಿಕೊಡಬೇಕು.

ವಾರದ ಸಂತೆಯು ರಸ್ತೆ ಪಕ್ಕದಲ್ಲಿಯೇ ನಡೆಯುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರೂ ಅ ಕವರುವುದರಿಂದ ಒತ್ತಡ ಜಾಸ್ತಿಯಾಗುತ್ತಿದೆ. ಸಂತೆ ಮಾರುಕಟ್ಟೆಯನ್ನು ಬಯಲು ಪ್ರದೇಶದಲ್ಲಿ ನಡೆಸುವಂತೆ ಮಾಡಿ ರಸ್ತೆ ಖುಲ್ಲಾ ಮಾಡಬೇಕು. ಮುರ್ಡೇಶ್ವರ ದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅನೇಕ ಅಪರಾಧಗಳನ್ನು, ಸ್ವತ್ಛತಾ ನಿಯಮಗಳನ್ನು ಪಾಲಿಸಲು ಅನುಕೂಲವಾಗುವುದು. ಇದಲ್ಲದೇ ಇನ್ನೂ ಅನೇಕ ಬೇಡಿಕೆಗಳಿದ್ದು ಇವುಗಳನ್ನು ತ್ವರಿತಗತಿಯಲ್ಲಿ ಪೂರೈಸಬೇಕು ಎಂದೂ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next