Advertisement
ಕ್ಲಾಕ್‌ಟವರ್-ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ವೃತ್ತ, ರಾವ್ ಆ್ಯಂಡ್ ರಾವ್ ವೃತ್ತದಿಂದ ಮತ್ತೆ ಕ್ಲಾಕ್‌ಟವರ್‌ಗೆ ಸುತ್ತಲೂ ಏಕಮುಖ ಸಂಚಾರ ಕಲ್ಪಿಸಲಾಗಿದ್ದು, ಈ ರಸ್ತೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪುರಭವನ ಬಳಿ ಅಂಡರ್‌ಪಾಸ್ ಕಾಮಗಾರಿಯೂ ಕೊನೆಯ ಹಂತದಲ್ಲಿದೆ. ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ ಸುತ್ತಲಿನ ಪರಿಸರಲ್ಲಿ ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಎಲ್ಲ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳಲು ಕೆಲವು ವಾರಗಳು ಬೇಕು. ಬಳಿಕ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಒಟ್ಟುಗೂಡಿಸಿ ಉದ್ಘಾಟಿಸಲು ತೀರ್ಮಾನಿಸಲಾಗಿದೆ.
Related Articles
Advertisement
ಸುಮಾರು 88 ಅಡಿ ಸುತ್ತಳತೆ ಹೊಂದಿರುವ ಈ ಕ್ಲಾಕ್‌ಟವರ್‌ನಲ್ಲಿ ಬಳಕೆಯಾಗುವ ಗಡಿಯಾರಕ್ಕೆ ಯಂತ್ರೋಪಕರಣಗಳು ಇಟಲಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. 8 ಬಗೆಯ ಬೆಲ್ ಮಾಡುವ ಸಾಮರ್ಥ್ಯ ಇರುವ ಮೈಕ್ರೋ ಪ್ರೊಸೆಸರ್ ಕೂಡ ಇದರಲ್ಲಿದೆ. ಈ ಕ್ಲಾಕ್‌ಗೆ ಅಕ್ರೇಲಿಕ್ ಶೀಟ್, ಸ್ಟೈನ್‌ಲೆಸ್ ಸ್ಟೀಲ್, ಎಸಿಪಿ ಶೀಟ್‌ಗಳನ್ನು ಬಳಸಿಕೊಂಡು ಸಿದ್ಧಪಡಿಸಿಕೊಂಡಿದ್ದು, ಈಗಾಗಲೇ ಗೋಪುರದ ನಾಲ್ಕು ಬದಿಗಳಿಗೆ ನಾಲ್ಕು ಕ್ಲಾಕ್‌ನ ಮಾದರಿಗಳಿಗೆ ನಾಲ್ಕು ಯಂತ್ರಗಳನ್ನು ಅಳವಡಿಸಲಾಗಿದೆ.
ಅಭಿವೃದ್ದಿ ಕಾಮಗಾರಿ
ಹಂಪನಕಟ್ಟೆ ಪರಿಸರದಲ್ಲಿ ಸದ್ಯ ವಿವಿಧ ಅಭಿವೃದಿ ಕಾಮಗಾರಿಗಳು ನಡೆಯುತ್ತಿದೆ. ಇಲ್ಲಿನ ಹಂಪನಕಟ್ಟೆ-ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ವೃತ್ತ-ರಾವ್ ಆ್ಯಂಡ್ ರಾವ್ ವೃತ್ತ ಸಹಿತ ಮತ್ತೆ ಹಂಪನಕಟ್ಟೆವರೆಗೆ ಲೂಪ್ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿದೆ. ಮತ್ತೊಂದೆಡೆ ಟೌನ್‌ಹಾಲ್ ಬಳಿ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕ್ಲಾಕ್‌ಟವರ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಲೂಪ್ ರಸ್ತೆ ಪೂರ್ಣಗೊಂಡ ಬಳಿಕ ಕ್ಲಾಕ್‌ಟವರ್ ಉದ್ಘಾಟನೆಗೊಳಿಸಲಾಗುವುದು. –ಡಿ. ವೇದವ್ಯಾಸ ಕಾಮತ್, ಶಾಸಕರು