Advertisement

ಇ-ಫೈಲಿಂಗ್ ಪೋರ್ಟಲ್ ನಿರ್ಮಿಸಲು ಇನ್ಫೋಸಿಸ್‌ ಗೆ 164.5 ಕೋಟಿ..!

05:54 PM Jul 27, 2021 | Team Udayavani |

ನವ ದೆಹಲಿ : ಇ-ಫೈಲಿಂಗ್ ಪೋರ್ಟಲ್ ನಿರ್ಮಿಸಲು ಇನ್ಫೋಸಿಸ್‌ ಸಂಸ್ಥೆಗೆ  2019 ರ ಜನವರಿ ಮತ್ತು 2021 ರ ಜೂನ್ ನಡುವೆ ಹೊಸ ಆದಾಯ ತೆರಿಗೆ ಸರ್ಕಾರ 164.5 ಕೋಟಿ ರೂ.ಗಳನ್ನು ಪಾವತಿಸಿದೆ.

Advertisement

ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ ಹಣಕಾಸು ಸಚಿವ ಪಂಕಜ್ ಚೌಧರಿ, “2019 ರ ಜನವರಿಯಿಂದ ಜೂನ್ 2021 ರವರೆಗೆ ಈ ಯೋಜನೆಯಡಿ ಇನ್ಫೋಸಿಸ್‌ ಗೆ ಪಾವತಿಸಿದ ಒಟ್ಟು ಮೊತ್ತ 164.5 ಕೋಟಿ ರೂ” ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್‌ ದಿಢೀರ್‌ ಭೇಟಿ

ಇನ್ನು, ತೆರಿಗೆದಾರರು, ತೆರಿಗೆ ವೃತ್ತಿಪರರು ಹಾಗೂ ಇತರ ಮಧ್ಯಸ್ಥಗಾರರು ಹೊಸ ಪೋರ್ಟಲ್‌ ನ ಕಾರ್ಯವೈಖರಿಯಲ್ಲಿ ದೋಷಗಳಿವೆ ಎಂದು ಆರೋಪಿಸಿರುವುದನ್ನೂ ಕೂಡ ಲಿಖಿತ ಉತ್ತರದಲ್ಲಿ ಉಲ್ಲೇಖಿಸಲಾಗಿದೆ.

ತೆರಿಗೆದಾರರು ಅನುಭವಿಸುವ ಸಮಸ್ಯೆಗಳು ಪೋರ್ಟಲ್‌ ನ ನಿಧಾನಗತಿಯ ಕಾರ್ಯನಿರ್ವಹಣೆ, ಕೆಲವು ಕ್ರಿಯಾತ್ಮಕತೆಗಳ ಲಭ್ಯತೆಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿವೆ.

Advertisement

ಇದನ್ನೂ ಓದಿ : ದೀದಿ ದಿಲ್ಲಿ ಪ್ರವಾಸ : ದೀದಿ ಮೋದಿ ಚರ್ಚೆ | ನಾಳೆ ವಿರೋಧ ಪಕ್ಷಗಳ ನಾಯಕರೊಂದಿಗೆ ಟೀ ಪಾರ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next