ಮೈಸೂರು : ಇಲ್ಲಿನ ಇನ್‌ಫೋಸಿಸ್ ನಲ್ಲಿ ತರಬೇತಿ ನಿರತ 21ರ ಹರೆಯದ ಮಹಿಳೆ ತನ್ನ ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆ ವಾಸವಾಗಿದ್ದ ಬಾಡಿಗೆ ಕೋಣೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಕರೆಯವರು ಪೊಲೀಸರಿಗೆ ದೂರು ನೀಡಿದಾಕ್ಷಣ ಧಾವಿಸಿ ಬಂದ ಅವರು ಬಾಗಿಲು ಒಡೆದು ನೋಡಿದಾಗಲೇ ಮಹಿಳೆ ನೇಣು ಬಿಗಿದುಕೊಂಡು ಸತ್ತಿರುವುದು ಕಂಡು ಬಂತು.
ಶವದ ಮರಣೋತ್ತರ ವರದಿಯ ಪ್ರಕಾರ ಕಳೆದ ಜುಲೈ 1ರಂದೇ ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಮಹಿಳೆ ಮೂಲತಃ ಕಲಬುರಗಿಯವರೆಂದು ಗೊತ್ತಾಗಿದೆ.
ಮಹಿಳೆಯ ಸಾವಿನ ಕಾರಣವೇನೆಂಬದು ಗೊತ್ತಾಗಿಲ್ಲ. ಆದರೆ ನೆರೆಕರೆಯವರು ಹೇಳುವಂತೆ ಆಕೆ ಈಚೆಗೆ ಖನ್ನತೆಯಿಂದ ಬಳಲುತ್ತಿದ್ದಳು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಆತ್ಮಹತ್ಯೆಗೆ ವಿಷಾದಿಸಿರುವ ಇನ್‌ಫೋಸಿಸ್, ಪ್ರಕರಣದ ತನಿಖೆಗೆ ಪೊಲೀಸರೊಂದಿಗೆ ಪೂರ್ತಿಯಾಗಿ ಸಹಕರಿಸುವುದಾಗಿಯೂ, ಮೃತ ಮಹಿಳೆಯ ಕುಟುಂಬಕ್ಕೆ ನೆರವಾಗುವುದಾಗಿಯೂ ಹೇಳಿದೆ.