Advertisement

Automation effect: ಇನ್‌ಫೋಸಿಸ್‌ನಿಂದ 9,000 ಉದ್ಯೋಗಿಗಳ ‘ಬಿಡುಗಡೆ’

12:19 PM Jan 20, 2017 | |

ಬೆಂಗಳೂರು : ದೇಶದ No.2 ಐಟಿ ಸಂಸ್ಥೆಯಾಗಿರುವ ಇನ್‌ಫೋಸಿಸ್‌ ಕಳೆದ ಒಂದು ವರ್ಷದಲ್ಲಿ ಆಟೋಮೇಶನ್‌ (ಯಾಂತ್ರೀಕರಣ) ಪರಿಣಾಮವಾಗಿ ಕೆಳಮಟ್ಟದ ಕೆಲಸ ಕಾರ್ಯಗಳಲ್ಲಿನ 9,000 ಮಂದಿ ಉದ್ಯೋಗಿಗಳನ್ನು “ಬಿಡುಗಡೆ’ ಮಾಡಿರುವುದಾಗಿ ಕಂಪೆನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿರುವ ಕೃಷ್ಣಮೂರ್ತಿ ಶಂಕರ್‌ ತಿಳಿಸಿದ್ದಾರೆ.

Advertisement

ಆಟೋಮೇಶನ್‌ ಪರಿಣಾಮವಾಗಿ “ಬಿಡಗಡೆ’ಮಾಡಲಾಗಿರುವ ಕೆಳಮಟ್ಟದ ಕೆಲಸ ಕಾರ್ಯಗಳಲ್ಲಿನ ಈ ಉದ್ಯೋಗಿಗಳನ್ನು ಪ್ರಕೃತ ಹೆಚ್ಚು ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಲಾಗಿದೆ ಎಂದವರು ಹೇಳಿದರು. 

‘ಆಟೋಮೇಶನ್‌ ಪರಿಣಾಮವಾಗಿ ನಾವು ಪ್ರತೀ ತ್ತೈಮಾಸಿಕದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಬಿಡುಗಡೆ ಮಾಡಿ ಅವರನ್ನು ವಿಶೇಷ ಕೋರ್ಸ್‌ಗಳಲ್ಲಿ ತೊಡಗಿಸಲು ಅವರಿಗೆ ತರಬೇತಿ ನೀಡುತ್ತಿದ್ದೇವೆ; ಇದರಿಂದಾಗಿ ಹೊಸ ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅವರಿಗೆ ಅನುಕೂಲವಾಗುತ್ತಿದೆ’ ಎಂದು ಶಂಕರ್‌ ಅವರು ವಿಶ್ವ ಆರ್ಥಿಕ ವೇದಿಕೆಯ ‘Global shapers’ ನ ಬೆಂಗಳೂರು ಘಟಕ ಸಂಘಟಿಸಿದ್ದ ಸಮಾವೇಶದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

2015ರಲ್ಲಿ ಫಿಲಿಪ್ಸ್‌ ಸೇರಿಕೊಂಡಿದ್ದ ಶಂಕರ್‌ ಅವರು, “ಮುಂಬರುವ ದಿನಗಳಲ್ಲಿ ಆಟೋಮೇಶನ್‌ ಪ್ರಕ್ರಿಯೆಯು ತೀವ್ರಗೊಳ್ಳಲಿದೆ; ಇದರ ಪರಿಣಾಮವಾಗಿ ಉದ್ಯೋಗಿಗಳ ನೇಮಕಾತಿ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಲಿದೆ’ ಎಂದು ಹೇಳಿದರು.  

“ಉದ್ಯೋಗಿಗಳ ನೇಮಕಾತಿ ಪ್ರಮಾಣ ಕಡಿಮೆಯಾಗುತ್ತಿರುವುದು ಪೂರ್ತಿಯಾಗಿ ಆಟೋಮೇಶನ್‌ನ ಪರಿಣಾಮವಲ್ಲ; ಬದಲು ವಿಶ್ವ ಆರ್ಥಿಕತೆಯಲ್ಲಿ ಆಗುತ್ತಿರುವ ಬದಲಾವಣೆ, ನಿಧಾನ ಗತಿ ಇತ್ಯಾದಿಗಳಿಂದಾಗಿ ಕಂಪೆನಿಯ ಆರ್ಥಿಕ ನಿರ್ವಹಣೆ ಚೆನ್ನಾಗಿ ಆಗುತ್ತಿಲ್ಲ’

Advertisement

‘ಈ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಇನ್‌ಫೋಸಿಸ್‌ 5,700 ಮಂದಿಯನ್ನು ನೇಮಿಸಿಕೊಂಡಿದೆ. ಆದರೆ ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು 17,000 ಮಂದಿಯನ್ನು ನೇಮಿಸಿಕೊಂಡಿತ್ತು. ಕಳೆದ ಡಿಸೆಂಬರ್‌ ತ್ತೈಮಾಸಿಕದಲ್ಲಿ ಇನ್‌ಫೋಸಿಸ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆ ವಸ್ತುತಃ ಕಡಿಮೆಯಾಗಿತ್ತು. ಭಾರತದ ನಂ.2 ಐಟಿ ಸಂಸ್ಥೆಯಾಗಿರುವ ಇನ್‌ಫೋಸಿಸ್‌ಗೆ ಇದೊಂದು ವಿಲಕ್ಷಣಕಾರಿ ವಿದ್ಯಮಾನವಾಗಿದೆ; ಪ್ರಕೃತ ಇನ್‌ಫೋಸಿಸ್‌ ಉದ್ಯೋಗಿಗಳ ಒಟ್ಟು ಸಂಖ್ಯೆ 1,99.763 ಆಗಿದೆ’ ಎಂದು ಶಂಕರ್‌ ಹೇಳಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next