ನವದೆಹಲಿ: ಇನ್ಫೋಸಿಸ್‌ನ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ ನೀಡಿದ್ದು, ಅವರು ಟೆಕ್ ಮಹೀಂದ್ರಾ ಸಂಸ್ಥೆಗೆ ಸಿಇಒ ಮತ್ತು ಎಂ.ಡಿ. ಆಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
Advertisement
ಈ ಬಗ್ಗೆ ಎರಡೂ ಸಂಸ್ಥೆಗಳು ಬಿಎಸ್‌ಇಗೆ ಲಿಖೀತ ಮಾಹಿತಿ ನೀಡಿವೆ. ತಮ್ಮ ಅವಧಿಯಲ್ಲಿ ವಿತ್ತೀಯ ಸೇವೆಗಳು, ಜೀವ ವಿಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗಿತ್ತು. ಅವರನ್ನು ಉಳಿಸಿಕೊಳ್ಳಲು ಭಾರೀ ಪ್ರಯತ್ನ ಮಾಡಲಾಗಿತ್ತು ಎಂಬ ಬಗ್ಗೆ ವರದಿಗಳೂ ಇವೆ. ಅವರ ಅಧಿಕಾರವಧಿ ಜೂ.9ಕ್ಕೆ ಮುಕ್ತಾಯವಾಗಲಿದೆ ಎಂದು ಇನ್ಫೋಸಿಸ್ ತಿಳಿಸಿದೆ. ಹೊಸ ಹುದ್ದೆಯಲ್ಲಿ ಅವರು 2023 ಡಿ.20ರಿಂದ 2028 ಡಿ.19ರ ವರೆಗೆ ಇರಲಿದ್ದಾರೆ.