ನವ ದೆಹಲಿ : ದೇಶದ ಮಾಹಿತಿ ಹಾಗೂ ತಂತ್ರಜ್ಞಾನ ದೈತ್ಯ ಸಂಸ್ಥೆಗಳಲ್ಲಿ ಒಂದಾದ ಇನ್ಫೊಸಿಸ್ ಜೂನ್ ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 5,195 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಜೂನ್ ತ್ರೈಮಾಸಿಕದ ಲಾಭದ ಪ್ರಮಾಣವು ಶೇಕಡಾ 22.7ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ತ್ರ್ಐ ಮಾಸಿಕದಲ್ಲಿ ಇನ್ಫೊಸಿಸ್ 4,233 ಕೋಟಿ ಲಾಭ ಗಳಿಸಿತ್ತು.
ಇದನ್ನೂ ಓದಿ : ಕ್ರೈಸ್ತ ಉದ್ಯಮಿ ಕಟ್ಟಿಸಿದ ವಿನಾಯಕ ದೇಗುಲ ಸಮಾಜಕ್ಕೆ ಸಿದ್ಧಿಯನ್ನು ನೀಡಲಿ: ಪಲಿಮಾರು ಶ್ರೀ
ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 27,896 ಕೋಟಿ ರೂ. ಆಗಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪಾರೇಖ್, ಸಂಸ್ಥೆಯ ಎಲ್ಲಾ ನೌಕರರ ಸಮರ್ಪಣಾ ಮನೋಭಾವ ಹಾಗೂ ನಮ್ಮ ಗ್ರಾಹಕರು ಸಂಸ್ಥೆ ಮೇಲೆ ಇಟ್ಟಿರುವ ವಿಶ್ವಾಸದ ಕಾರಣದಿಂದಾಗಿಈ ತ್ರೈಮಾಸಿಕದಲ್ಲಿ ವೇಗದ ಬೆಳವಣಿಗೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉಡುಪಿ: ಗೃಹರಕ್ಷಕದಳದ ಕಮಾಂಡೆಂಟ್ ಡಾ| ಕೆ. ಪ್ರಶಾಂತ್ ಶೆಟ್ಟಿ ಅವರಿಗೆ ಚಿನ್ನದ ಪದಕ ಪ್ರಧಾನ