Advertisement

ಚಿತ್ರರಂಗದ ಕಾರ್ಮಿಕರ ನೆರವಿಗೆ ಬಂದ ಇನ್ಫೋಸಿಸ್‌ ಫೌಂಡೇಶನ್‌

11:36 AM Apr 20, 2020 | Suhan S |

ಕನ್ನಡ ಚಿತ್ರರಂಗ ಈಗ ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದೆ. ಈಗಾಗಲೇ ಸಮಸ್ಯೆ ಸುಳಿಯಲ್ಲಿ ಸಿಲುಕಿರುವ ಸಾವಿರಾರು ಕಾರ್ಮಿಕರ ನೆರವಿಗೆ ಹಲವು ಸಂಘ-ಸಂಸ್ಥೆಗಳು, ಸ್ಟಾರ್‌ಗಳು, ಸರ್ಕಾರ ನೆರವಿಗೆ ಧಾವಿಸಿರುವುದು ಗೊತ್ತೇ ಇದೆ. ಈಗ ಚಿತ್ರರಂಗದಲ್ಲಿ ಕಷ್ಟ ಅನುಭವಿಸುತ್ತಿರುವ ಕಾರ್ಮಿಕರ ಸಹಾಯಕ್ಕೆ ಇನ್ಫೋಸಿಸ್‌ ಫೌಂಡೇಶನ್‌ ಕೂಡ ನೆರವಿಗೆ ಬಂದಿದೆ.

Advertisement

ಹೌದು ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್‌ ಫೌಂಡೇಷನ್‌ ಮೂಲಕ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲಾಗುತ್ತಿದೆ. ಚಿತ್ರರಂಗದ ಒಟ್ಟು 18 ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕರಿಗೆ ಅಗತ್ಯವಾಗಿರುವ ಆಹಾರ ಸಾಮಾಗ್ರಿಗಳನ್ನು ಇನ್ಫೋಸಿಸ್‌ ಫೌಂಡೇಷನ್‌ ವಿತರಿಸಲು ಮುಂದಾಗಿದೆ. ಈಗಾಗಲೇ ಬನಶಂಕರಿ ಅಂಚೆ ಕಚೇರಿ ಸಮೀಪ ಇರುವ ಕಚೇರಿಯಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆತಿದೆ.

ಗಾಳಿಪಟ 2 ಚಿತ್ರದ ನಿರ್ಮಾಪಕ ರಮೇಶ್‌ ರೆಡ್ಡಿ ಅವರು, ಇನ್ಫೋಸಿಸ್‌ ಫೌಂಡೇಷನ್‌ ವತಿಯಿಂದ ದೇಶ ಹಾಗು ರಾಜ್ಯದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ಆಗುತ್ತಿವೆ. ಈ ಸಂಕಷ್ಟದ ಸಂದರ್ಭದಲ್ಲೂ ಕಾರ್ಮಿಕರ ನೆರವಿಗೆ ಸುಧಾಮೂರ್ತಿ ಅವರ ನೇತೃತ್ವದ ಫೌಂಡೇಷನ್‌ ಕಾಳಜಿ ತೋರಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದಿದ್ದಾರೆ.

ಅಂದಹಾಗೆ, ಕರ್ನಾಟಕ ಚಿತ್ರರಂಗದ ಪರವಾಗಿ ಸಾ.ರಾ.ಗೋವಿಂದು ಆವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಕಷ್ಟದಲ್ಲಿರುವ ಕಾರ್ಮಿರಿಗೆ ಫೌಂಡೇಷನ್‌ ವತಿಯಿಂದ ಆಹಾರ ಸಾಮಾಗ್ರಿ ಪೂರೈಸುತ್ತಿರುವುದನ್ನು ಶ್ಲಾ ಸಿದ್ದಾರೆ. ಈ ವೇಳೆ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿಶಂಕರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next