Advertisement

ಅಮೆರಿಕ ಇನ್ಫೋಸಿಸ್‌ ಅಧ್ಯಕ್ಷ ರಾಜೀನಾಮೆ; ಸಿಕ್ಕಾ ಗೆ ಭಾರೀ ಹಿನ್ನಡೆ

12:10 PM Jun 16, 2017 | udayavani editorial |

ಬೆಂಗಳೂರು : ಇನ್‌ಪೋಸಿಸ್‌ನ ಅಮೆರಿಕ ಘಟಕದ ಮುಖ್ಯಸ್ಥ ಹಾಗೂ ಜಾಗತಿಕ  ಉತ್ಪಾದನೆ ಮತ್ತು ಸಗಟು ವಹಿವಾಟುಗಳ ಮುಖ್ಯಸ್ಥರಾಗಿರುವ ಸಂದೀಪ್‌ ದದ್ಲಾನಿ ಅವರು ತಮ್ಮ ಹುದ್ದೆಗೆ ನಿನ್ನೆ ಗುರುವಾರ ಹಠಾತ್‌ ರಾಜೀನಾಮೆ ನೀಡಿದ್ದಾರೆ. ಕಂಪೆನಿಯ ಸಿಇಓ ವಿಶಾಲ್‌ ಸಿಕ್ಕಾ ಅವರಿಗೆ ಇದೊಂದು ಭಾರೀ ದೊಡ್ಡ ಹಿನ್ನಡೆ ಎಂದು ತಿಳಿಯಲಾಗಿದೆ.

Advertisement

ನಿನ್ನೆ ಗುರುವಾರದ ಈ ದಿಢೀರ್‌ ಬೆಳವಣಿಗೆಯನ್ನು ಅನುಸರಿಸಿ ನಿನ್ನೆ ರಾತ್ರಿಯೇ  ದದ್ಲಾನಿ ಅವರ ಸ್ಥಾನಕ್ಕೆ  ಇಬ್ಬರು ಎಕ್ಸಿಕ್ಯುಟಿವ್‌ಗಳನ್ನು ಕಂಪೆನಿಯು ನೇಮಿಸಿದೆ. ಅವರೆಂದರೆ ಕರ್ಮೇಶ್‌ ವಾಸ್ವಾನಿ (ಗ್ಲೋಬಲ್‌ ಹೆಡ್‌ ಫಾರ್‌ ರೀಟೇಲ್‌, ಸಿಪಿಜಿ ಆ್ಯಂಡ್‌ ಲಾಜಿಸ್ಟಿಕ್ಸ್‌ (ಆರ್‌ಸಿಎಲ್‌) ಹಾಗೂ ನಿತೇಶ್‌ ಬಂಗಾ (ಗ್ಲೋಬಲ್‌ ಹೆಡ್‌ ಫಾರ್‌ ಮೆನ್ಯುಫ್ಯಾಕ್ಚರಿಂಗ್‌).

ದದ್ಲಾನಿ ಅವರು ಇನ್‌ಫೋಸಿಸ್‌ನ ನಾಲ್ಕು ಅಧ್ಯಕ್ಷರಲ್ಲಿ ಒಬ್ಬರಾಗಿದ್ದರು. ಇನ್‌ಫೋಸಿಸ್‌ನ ಮೂರನೇ ಒಂದಂಶ ಆದಾಯಕ್ಕೆ ಇವರೇ ಕಾರಣೀಭೂತರಾಗಿದ್ದರು. ಇನ್‌ಫೋಸಿಸ್‌ ತನ್ನ ಒಟ್ಟು ಆದಾಯದ ಶೇ.65ರಷ್ಟನ್ನು ಅಮೆರಿಕ ಒಂದರಿಂದಲೇ ಗಳಿಸುತ್ತಿರುವುದು ಗಮನಾರ್ಹವಾಗಿದೆ. 

ಎರಡನೇ ಅತೀ ದೊಡ್ಡ ತಂತ್ರಾಂಶ ರಫ್ತುದಾರ ಸಂಸ್ಥೆಯಾಗಿರುವ ಇನ್‌ಫೋಸಿಸ್‌ನ ಸಾಗರೋತ್ತರ ವಹಿವಾಟುಗಳನ್ನು  ನಿಭಾಯಿಸಲು ವಿಶಾಲ್‌ ಸಿಕ್ಕಾ ತೀವ್ರ ಹೆಣಗಾಟ ನಡೆಸುತ್ತಿರುವ ಈ ಸಂದರ್ಭದಲ್ಲೇ ದದ್ಲಾನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಇದು ಸಿಕ್ಕಾ ಅವರಿಗೆ ಭಾರೀ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿರುವುದಾಗಿ ತಿಳಿಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next