Advertisement
ಹೈಕ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಇಂಜಿನಿಯರಿಂಗ್ ಕಾಲೇಜು ಹಾಗೂ ಸಂಸ್ಥೆಯ ಇತರ ಕಾಲೇಜುಗಳ ಸಹಯೋಗದಲ್ಲಿ ಮಂಗಳವಾರ ಸಂಸ್ಥೆಯ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಆರಂಭಗೊಂಡ ಅಂತರ್ಜಾಲ ವಸ್ತು (ಇಂಟರ್‌ನೆಟ್ ಆಫ್ ಥಿಂಗ್ಸ್) ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಡೀನ್ ಡಾ| ಅನೀಲಕುಮಾರ ಬಿಡವೆ ಮಾತನಾಡಿ, ಮುಂದುವರಿದ ರಾಷ್ಟ್ರಗಳಲ್ಲಿ ಇಂಟರನೆಟ್ ಆಫ್ ಥಿಂಗ್ಸ್ ವ್ಯಾಪಕವಾಗಿ ಬೆಳೆದಿದೆ. ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಅಂತರಜಾಲ ಬಳಕೆ ನಮಗೂ ಸರಳಗೊಳ್ಳಲಿ ಎನ್ನುವ ಸದಾಶಯದೊಂದಿಗೆ ಡಾ| ಶರಣಬಸವಪ್ಪ ಅಪ್ಪ ಇಂತಹ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಎಂಟಿಎ ವಿಭಾಗ ವತಿಯಿಂದ ಹೊರ ತರಲಾದ ಜಿಲ್ಲೆಯ ಐತಿಹಾಸಿಕ ತಾಣಗಳ ಸಾಕ್ಷéಚಿತ್ರವನ್ನು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು. ಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ, ಎಚ್‌ಕೆಇ ಸಂಸ್ಥೆಯ ಆಡಳಿತ ಮಂಡಳಿ ಮಾಜಿ ಸದಸ್ಯ ರಾಜು ಭೀಮಳ್ಳಿ, ದೊಡ್ಡಪ್ಪ ನಿಷ್ಠಿ, ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ವಿ. ಡಿ. ಮೈತ್ರಿ ಅಮೆರಿಕಾದ ಕ್ಯಾಲಿಪೋರ್ನಿಯಾದಿಂದ ಡಾ| ಶಿವಕುಮಾರ ಮಠಪತಿ,
ಐರ್ಲ್ಯಾಂಡಿನ್ ನ್ಯಾಷನಲ್ ವಿಶ್ವವಿದ್ಯಾಲಯದ ಡಾ| ಮಾರ್ಟಿನ್ ಸೆರಿನ್ನಾ, ಆಸ್ಟ್ರೇಲಿಯಾದ ಸ್ಪಿನ್ ಬರ್ನ್ ವಿಶ್ವವಿದ್ಯಾಲಯದ ಡಾ| ಪ್ರೇಮಪ್ರಕಾಶ ಜಯರಾಮನ್ ಹಾಜರಿದ್ದರು. ಸಮ್ಮೇಳನದಲ್ಲಿ ದೇಶ-ವಿದೇಶಗಳ ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಬೃಹತ್ ಉದ್ದಿಮೆದಾರರು ಹಾಗೂ ಇತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ತಾಂತ್ರಿಕ ಗೋಷ್ಠಿ, ಸಂವಾದಗಳು ನಡೆದವು.