Advertisement

ಮೈತ್ರಿ ಸರ್ಕಾರದಿಂದ ರೈಲ್ವೆ ಯೋಜನೆಗಳ ಮೇಲೆ ಪ್ರಭಾವ

12:08 PM May 23, 2018 | Team Udayavani |

ಬೆಂಗಳೂರು: ಕೇಂದ್ರಕ್ಕೆ ವ್ಯತಿರಿಕ್ತವಾದ “ಮೈತ್ರಿ’ ಸರ್ಕಾರದಿಂದ ಕೇಂದ್ರದ ಅನುದಾನವನ್ನೇ ಅವಲಂಭಿಸಿರುವ ನಗರದ ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ  ಬೀರಲಿದೆಯೇ?  ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಇಂತಹದ್ದೊಂದು ಆತಂಕ ನಗರದ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳಲ್ಲಿ ಮನೆಮಾಡಿದೆ. 

Advertisement

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿ ಕೂಡ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತಾಗಿದ್ದು, ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚನೆಗೆ ಮುಂದಾಗಿವೆ. ಇದು ಸಹಜವಾಗಿಯೇ ಕೇಂದ್ರಕ್ಕೆ ಅಸಮಾಧಾನ ಉಂಟುಮಾಡಿದೆ. ಇದರಿಂದ “ನಮ್ಮ ಮೆಟ್ರೋ’, ಉಪನಗರ ರೈಲು ಯೋಜನೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. 

ಈಗಾಗಲೇ ಈ ಎರಡೂ ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಹಣ ಕೂಡ ಬಿಡುಗಡೆ ಆಗಿದೆ. ಅಷ್ಟಕ್ಕೂ ಯಾವುದೇ ಸರ್ಕಾರಗಳು ಬಂದರೂ ಮೆಟ್ರೋ ಯೋಜನೆಗೆ ಹಣದ ಹರಿವಿನಲ್ಲಿ ಕೊರತೆ ಆಗದು. ಯಾಕೆಂದರೆ, ಹಣದ ಪಾಲುದಾರಿಕೆ ಪೂರ್ವ ನಿರ್ಧರಿತವಾಗಿರುವುದರಿಂದ ಪ್ರತಿ ವರ್ಷ ಯೋಜನೆ ಪ್ರಗತಿಗೆ ಅನುಗುಣವಾಗಿ ಹಣ ನೇರವಾಗಿ ಬಿಎಂಆರ್‌ಸಿಗೆ ಬಿಡುಗಡೆ ಆಗುತ್ತದೆ. ಉಪನಗರ ರೈಲು ಯೋಜನೆ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಹೇಳಲಾಗಿದೆ.

ಚುನಾವಣಾ ಎಫೆಕ್ಟ್; ಕಾಮಗಾರಿಗೆ ವೇಗ?:  ಮುಂದಿನ ಹತ್ತು ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಜನ ಕೂಡ ಇದನ್ನು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾರಣದಿಂದ ಎರಡೂ ಸರ್ಕಾರಗಳಿಗೂ ಯೋಜನೆಗಳು ತ್ವರಿತ ಗತಿಯಲ್ಲಿ ಆಗುವುದು ಮುಖ್ಯವಾಗಿದೆ. ಇದಕ್ಕಾಗಿ ಆದ್ಯತೆ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳುತ್ತವೆ ಎಂದು ಪ್ರಜಾ ಸಂಸ್ಥೆಯ ಸಂಜೀವ್‌ ದ್ಯಾಮಣ್ಣವರ ಅಭಿಪ್ರಾಯಪಡುತ್ತಾರೆ. 

17 ಸಾವಿರ ಕೋಟಿ ಮೊತ್ತದ ಉಪನಗರ ರೈಲು ಯೋಜನೆಗೆ “ವಿಶೇಷ ಉದ್ದೇಶ ವಾಹನ’ (ಎಸ್‌ಪಿವಿ) ರಚನೆಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಅನುಮೋದನೆ ದೊರಕಿದ್ದು, ಕೇಂದ್ರಕ್ಕೆ ಹೋಗಿದೆ. ಇನ್ನು ಕೇಂದ್ರವು ಬಜೆಟ್‌ನಲ್ಲಿ 1 ಕೋಟಿ ಬಿಡುಗಡೆ ಮಾಡಿದೆ. ಇದು ಮೇಲ್ನೋಟಕ್ಕೆ ಕೇವಲ ಒಂದು ಕೋಟಿ ರೂ. ಅನಿಸಿದರೂ, ಅಟೋಮೆಟಿಕ್‌ ಸಿಗ್ನಲಿಂಗ್‌, ವಿದ್ಯುದ್ದೀಕರಣ, ಜೋಡಿ ಹಳಿಗಳ ನಿರ್ಮಾಣ ಸೇರಿದಂತೆ ಉಪನಗರ ರೈಲು ಯೋಜನೆಗೆ ಪೂರಕವಾದ ಕಾಮಗಾರಿಗಳಿಗೆ ಪರೋಕ್ಷವಾಗಿ ಈಗಾಗಲೇ ಹತ್ತಾರು ಕೋಟಿ ಬಿಡುಗಡೆಯಾಗಿದೆ ಎಂದೂ ಅವರು ಹೇಳುತ್ತಾರೆ. 

Advertisement

ಆಕ್ಷೇಪ ಸಾಧ್ಯತೆ: ನ್ನು ಮೆಟ್ರೋದಂತಹ ಯೋಜನೆಗಳಲ್ಲಿ ಮೊದಲು ಹಣ ಹೊಂದಾಣಿಕೆ ನಂತರ ಅನುಮೋದನೆ ದೊರೆಯುತ್ತದೆ. 26,500 ಕೋಟಿ ಎರಡನೇ ಹಂತದ ಯೋಜನೆಗೆ 2014ರಲ್ಲೇ ಅನುಮೋದನೆ ದೊರೆತಿದ್ದು, ಮೊದಲ ಹಂತದಲ್ಲಿ ಹಣ ಕೂಡ ಬಿಡುಗಡೆ ಆಗಿದೆ. ಆದರೆ, ಪ್ರಗತಿ ಮಂದಗತಿಯಲ್ಲಿ ಸಾಗಿರುವುದರಿಂದ ಯೋಜನಾ ವೆಚ್ಚ ಹೆಚ್ಚಳ ಆಗುವ ಸಾಧ್ಯತೆ ಇದೆ. ಇಂತಹ ವೇಳೆ ಮಾತ್ರ “ಯೋಜನೆ ಅಂದಾಜು ವೆಚ್ಚ ಹೆಚ್ಚಳಕ್ಕೆ ಕಾರಣ ಕೊಡಿ’ ಎಂದು ಕೇಂದ್ರದಿಂದ ಆಕ್ಷೇಪ ಬರಬಹುದು ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಉನ್ನತ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 

ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳು
ಯೋಜನೆ    ಯೋಜನಾ ವೆಚ್ಚ    ಬಿಡುಗಡೆ ಆಗಿದ್ದು (ಕೋಟಿ ರೂ.ಗಳಲ್ಲಿ)
-ಬೈಯಪ್ಪನಹಳ್ಳಿ ಟರ್ಮಿನಲ್‌    115    45
-ಕಂಟೋನ್ಮೆಂಟ್‌-ವೈಟ್‌ಫೀಲ್ಡ್‌ (ಅಟೋಮೆಟಿಕ್‌ ಸಿಗ್ನಲಿಂಗ್‌)    14     10
-ಯಶವಂತಪುರ-ಹೊಸೂರು (ವಿದ್ಯುದ್ದೀಕರಣ)    80    10
-ಚಿಕ್ಕಬಾಣಾವರ-ತುಮಕೂರು-ಹುಬ್ಬಳ್ಳಿ (ವಿದ್ಯುದ್ದೀಕರಣ)    500    10 
-ಯಲಹಂಕ-ಗುಂದಕಲ್‌ (ಜೋಡಿ ಮಾರ್ಗ)    300    300
-ಕಂಟೋನ್ಮೆಂಟ್‌-ವೈಟ್‌ಫೀಲ್ಡ್‌ (ಚತುಷ್ಪಥ)    400    ಟೆಂಡರ್‌ ಕರೆದಿದೆ
-ಉಪನಗರ ರೈಲು    17,000    1

“ನಮ್ಮ ಮೆಟ್ರೋ’
ಯೋಜನೆ    ಅಂದಾಜು ವೆಚ್ಚ

-2ನೇ ಹಂತ (2 ಹೊಸ ಮಾರ್ಗ ಸೇರಿ)    26,500
-2ಎ (ಸಿಲ್ಕ್ಬೋರ್ಡ್‌-ಕೆ.ಆರ್‌.ಪುರ)    4,900
-2ಬಿ (ನಾಗವಾರ-ಕೆಐಎಎಲ್‌)    5,500 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next